ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಎರಡು ಹುಲಿ ಪ್ರತ್ಯಕ್ಷ | ಆತಂಕದಲ್ಲಿ ಜನ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿ ತೋಟದಲ್ಲಿ ಎರಡು ಹುಲಿಗಳು ಕಾಣಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ನಗರದ ಹಿರೇಕೊಳಲೆ ಗ್ರಾಮದಲ್ಲಿ ನಡೆದಿದೆ.


ಇದನ್ನೂ ಓದಿ; BPL ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್; ಈ ತರಬೇತಿಗೆ ಅರ್ಜಿ ಆಹ್ವಾನ


ಹಿರೇಕೊಳಲೆ ಗ್ರಾಮದ ಶ್ರೀಕಂಠೇಗೌಡ ಅವರ ಕಾಫಿ ತೋಟದಲ್ಲಿ ಶನಿವಾರ ಸಂಜೆ 5.30 ರ ವೇಳೆಗೆ ಹುಲಿಗಳು ಘರ್ಜಿಸಿದ ಶಬ್ಧ ಕೇಳಿ ಬಂದಿದೆ. ಕೂಡಲೇ ಕೆಲಸ ಮಾಡುವ ಕಾರ್ಮಿಕರನ್ನು ಕರೆದುಕೊಂಡು ತೋಟಕ್ಕೆ ಹೋಗಿ ನೋಡಿದಾಗ ಎರಡು ಹುಲಿಗಳು ಪ್ರತ್ಯಕ್ಷವಾಗಿದೆ. ಕೂಡಲೇ ಶ್ರೀಕಂಠೇಗೌಡರು ಹಾಗೂ ತೋಟದ ಕಾರ್ಮಿಕರು ಕೂಗಾಡಲು ಆರಂಭಿಸಿದ್ದಾರೆ. ಆಗ ಹುಲಿಗಳು ಒಂದೊಂದು ದಿಕ್ಕಿಗೆ ಓಡಿ ಹೋಗಿವೆ.


ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?


ಡಿಎಫ್‌ಒ ರಮೇಶ್ ಬಾಬು ಅವರಿಗೆ ಕರೆ ಮಾಡಿ ವಿಷಯ ತಿಳಿಸುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಾದ ಸಂಪತ್ ಮತ್ತಿತರರ ತಂಡ ಭೇಟಿ ನೀಡಿ ಹುಲಿಗಳ ಹೆಜ್ಜೆ ಗುರುತುಗಳನ್ನು ಫೋಟೋ ತೆಗೆದುಕೊಂಡಿದ್ದು, ಹುಲಿಗಳನ್ನು ಓಡಿಸಲು ಕ್ರಮ ಕೈಗೊಂಡಿದ್ದಾರೆ. ಎರಡು ಹುಲಿಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಭಾಗದ ಜನ ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.


ಇದನ್ನೂ ಓದಿ; ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ; ಪಿಯುಸಿ ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.