ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಹೊನ್ನೆಕೊಪ್ಪ ಗ್ರಾಮದಲ್ಲಿ ನಿರಂತರ ಮಳೆಗೆ ಅರಣ್ಯ ಇಲಾಖೆಗೆ ಸೇರಿದ ಕೃಷಿ ಹೊಂಡದ ತಡೆಗೋಡೆ ಕುಸಿತಗೊಂಡಿದ್ದು, ಪರಿಣಾಮ ವಿಠ್ಠಲ್ ರೈ ಎಂಬುವವರಿಗೆ ಸೇರಿದ ಕಾಫಿ ತೋಟದಲ್ಲಿ ಭಾರಿ ಹಾನಿ ಸಂಭವಿಸಿದೆ.
ಇದನ್ನೂ ಓದಿ: AI ಕ್ರಾಂತಿಗೆ ಹೆಜ್ಜೆ; ಯತಿಕಾರ್ಪ್ನಿಂದ 10,000 ಮಂದಿಗೆ 20,000 ಮೌಲ್ಯದ ಉಚಿತ AI ಶಿಕ್ಷಣ ಕಿಟ್

ಕಳೆದ ಹಲವು ದಿನಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಹೊಂಡದಲ್ಲಿ ನೀರಿನ ಮಟ್ಟ ವ್ಯಾಪಕವಾಗಿ ಏರಿಕೆಯಾಗಿತ್ತು. ನೀರಿನ ಒತ್ತಡದ ಮುಂದೆ ತಡೆಗೋಡೆ ತಡೆಯಲಾಗದೆ ಕುಸಿತಗೊಂಡಿದ್ದು, ಹೊಂಡದಲ್ಲಿನ ನೀರು ಹಾಗೂ ಮೇಲ್ಬಾಗದಿಂದ ಕೊಚ್ಚಿ ಬಂದ ಬಂಡೆಕಲ್ಲುಗಳು ತೋಟದೊಳಗೆ ನುಗ್ಗಿದವು. ಪರಿಣಾಮ ತೋಟದಲ್ಲಿ ಬೆಳೆ ನಾಶವಾಗಿದ್ದು, ಮಣ್ಣು ಕೊಚ್ಚಿ ಹೋಗಿರುವುದು ಕಂಡುಬಂದಿದೆ.
ಸ್ಥಳೀಯರು ಹಾಗೂ ತೋಟ ಮಾಲೀಕರು ಈ ಕುರಿತು ಅರಣ್ಯ ಇಲಾಖೆ ಹಾಗೂ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಬೇಕಾಗಿದೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ಜಾತಿ ಪ್ರಮಾಣ ಪತ್ರ ಪಡೆಯುವುದು ಹೇಗೆ?; ಯಾರೆಲ್ಲಾ ಅರ್ಹರು? ಪ್ರಯೋಜನಗಳೇನು?












