ಚಿಕ್ಕಮಗಳೂರು: ಪ್ರಜಾಪ್ರಭುತ್ವ ದಿನ: 92 ಕಿ.ಮೀ ಮಾನವ ಸರಪಳಿ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾನವ ಸರಪಳಿ ರಚಿಸಲಾಯಿತು. ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಶಾಲಾ ಕಾಲೇಜು ಮಕ್ಕಳೂ ಸೇರಿದಂತೆ ಸರ್ಕಾರಿ ನೌಕರರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಜಿಲ್ಲಾದ್ಯಂತ 92 ಕಿ.ಮೀ. ಮಾನವ ಸರಪಳಿ ನಿರ್ಮಿಸಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಿದರು.


ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?


ಪ್ರಜಾಪ್ರಭುತ್ವ ದಿನಾಚರಣೆ ಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರು ಪರಸ್ಪರ ಕೈಹಿಡಿದು ಸರಪಳಿ ನಿರ್ಮಿಸಿದರು. ನಂತರ ಎರಡು ಕೈಗಳನ್ನು ಮೇಲೆತ್ತಿ ಪ್ರಜಾಪ್ರಭುತ್ವ ದಿನವನ್ನು ಸಂಭ್ರಮಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೀಶ್ ಸಂವಿಧಾನ ಪೀಠಿಕೆ ಓದಿದರು. ಇವರ ಜೊತೆ ಪ್ರತಿಯೊಬ್ಬರು ಸಂವಿಧಾನ ಪೀಠಿಕೆಯನ್ನು ಪಠಿಸಿದರು.


ಇದನ್ನೂ ಓದಿ; ಮತ್ತೆ APL-BPL ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ; ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ..!


ಚಿಕ್ಕಮಗಳೂರು ಗಡಿಭಾಗದ ಮಾಗಡಿ ಕೈಮರದಿಂದ ಆರಂಭವಾದ ಪ್ರಜಾಪ್ರಭುತ್ವ ಸಂವಿಧಾನ ಜಾಗೃತಿಯ ಮಾನವ ಸರಪಳಿ ನಗರದ ಹಿರೇಮಗಳೂರು, ಎಂ.ಜಿ.ರಸ್ತೆ, ಸಖರಾಯಪಟ್ಟಣ, ಕಡೂರು, ಬೀರೂರು, ತರೀಕೆರೆ ಮಾರ್ಗವಾಗಿ ಜಿಲ್ಲೆಯ ಗಡಿ ಎಂ.ಸಿ ಹಳ್ಳಿವರೆಗೆ ಒಟ್ಟು 92ಕೀ.ಮೀ. ಮಾನವ ಸರಪಳಿ ನಿರ್ಮಿಸಲಾಯಿತು. ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಮುಖಂಡರು, ಸ್ವಯಂಸೇವಕರು, ಸೇರಿದಂತೆ ಜಿಲ್ಲಾದ್ಯಂತ ೮೦ಸಾವಿರಕ್ಕೂ ಹೆಚ್ಚಿನ ಜನ ಮಾನವ ಸರಪಳಿಯಲ್ಲಿ ಏಕಕಾಲದಲ್ಲಿ ಪಾಲ್ಗೊಂಡರು.


ಇದನ್ನೂ ಓದಿ; ಅಡುಗೆ ಎಣ್ಣೆ ದರ ದಿಢೀರ್ ಏರಿಕೆ; ಎಷ್ಟಿದೆ ಗೊತ್ತಾ?


ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ಹೆಮ್ಮೆಯ ರಾಷ್ಟ್ರದ ವೈವಿದ್ಯಮಯ ಧ್ವನಿಗಳ ಅಭಿವ್ಯಕ್ತಿಗೆ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಗೆ ಅವಕಾಶ ನೀಡುವ ಆಡಳಿತ ವ್ಯವಸ್ಥೆಯೇ ಪ್ರಜಾಪ್ರಭುತ್ವದ ಜೀವಾಳವಾಗಿದೆ ಎಂದರು.


ಇದನ್ನೂ ಓದಿ; ಕಡಿಮೆ ಬೆಲೆಗೆ ಐಫೋನ್ 16 ಖರೀದಿಸಬೇಕಾ?; ಹಳೆಯ ಸ್ಮಾರ್ಟ್ ​ಫೋನ್ ಮರಳಿಸಿದರೆ ಭರ್ಜರಿ ಡಿಸ್ಕೌಂಟ್


ಭಾರತದಲ್ಲಿ ಅನೇಕ ಧರ್ಮ, ಸಂಸ್ಕೃತಿ, ಭಾಷೆಗಳಿಂದ ಕೂಡಿದೆ. ವಿವಿಧರೆಯಲ್ಲಿ ಏಕತೆಯನ್ನು ಸಾರುವ ಸಂವಿಶಾನತ್ಮಕ ಹಕ್ಕುಗಳ ಪಡೆಯುವುದರೊಂದಿಗೆ ಅದರ ಕರ್ತವ್ಯ ಪಾಲನೆಯೂ ಮುಖ್ಯ. ಅಂಬೇಡ್ಕರ್ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಪಾಲನೆ ಮಾಡಿದಲ್ಲಿ ಭಾರತ ವಿಶ್ವಗುರುವಾಗುತ್ತದೆ ಎಂದು ಸಿ. ಟಿ ರವಿ ಹೇಳಿದರು.


ಇದನ್ನೂ ಓದಿ; ಕೇವಲ 10 ಸಾವಿರಕ್ಕೆ ಮನೆಗೆ ತರಬಹುದು ಈ ಬೈಕ್; ಹೇಗೆ ಗೊತ್ತಾ? ಇಲ್ಲಿದೆ ನೋಡಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.