ಕಳಸ; (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕೋಣೇಬೈಲು ಪರಿಶಿಷ್ಟರ ಬಡಾವಣೆ ನಿವಾಸಿಗಳು ಕುಡಿಯುವ ನೀರಿನ ಸಮಸ್ಯೆ ಅನುಭವಿಸುತ್ತಿದ್ದರೂ ಸಂಬಂಧಿಸಿದ ಇಲಾಖಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ.

ಕಳಸ ಗ್ರಾಪಂ ವ್ಯಾಪ್ತಿಯಲ್ಲಿರುವ ಕೋಣೇಬೈಲು ಪರಿಶಿಷ್ಟರ ಬಡಾವಣೆಯಲ್ಲಿ 20 ದಲಿತ ಕುಟುಂಬಗಳು ವಾಸವಾಗಿದೆ. ನೈಸರ್ಗಿಕವಾಗಿ ಕಾಲುವೆಯಲ್ಲಿ ಹರಿದು ಬರುತ್ತಿದ್ದ ನೀರನ್ನೇ ಕುಡಿಯಲು ಹಾಗೂ ಕೃಷಿ ಮಾಡಲು ಬಳಸುತ್ತಿದ್ದಾರೆ. ಆದರೆ, ದಲಿತ ಕಾಲನಿ ಸಮೀಪದಲ್ಲಿರುವ ದೇವರಪಾಲ್ ಎಸ್ಟೇಟ್ ನ ಸವರ್ಣೀಯ ಕುಟುಂಬವರೂ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ದಲಿತ ನಿವಾಸಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿ; ಆಧಾರ್ ಕಾರ್ಡ್ ಅಪ್ಡೇಟ್ ಗೆ ಕೆಲವೇ ದಿನ ಬಾಕಿ; ಹೇಗೆ ಅಪ್ ಡೇಟ್ ಮಾಡುವುದು?
ಕಾಲುವೆಗೆ ಕಾಂಕ್ರಿಟ್ ಹಾಕಿಸಿದ್ದ ಸವರ್ಣೀಯರು:
ಕಳೆದೊಂದು ತಿಂಗಳ ಹಿಂದೆ ಹಿನಾರಿ ಎಸ್ಟೇಟ್ ನಿಂದ ನೈಸಗಿ೯ಕವಾಗಿ ಹರಿದು ಬರುತ್ತಿದ್ದ ಕಾಲುವೆಗೆ ದೇವರಪಾಲು ಎಸ್ಟೇಟ್ ನ ಸವರ್ಣೀಯರು ಹಿನಾರಿಎಸ್ಟೇಟ್ ನವರ ಅನುಮತಿ ಇಲ್ಲದೆ ಕಾಂಕ್ರಿಟ್ ಹಾಕಿದ್ದರು. ಪರಿಣಾಮ ದಲಿತರಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ನಿವಾಸಿಗಳು ದೂರುತ್ತಿದ್ದಾರೆ. ಈ ಸಂಬಂಧ ಮಾಲೀಕರ ಬಳಿ ಅಳಲು ತೋಡಿಕೊಂಡ ಪರಿಣಾಮ ಹಿನಾರಿ ಎಸ್ಟೇಟ್ ನವರು ತಮ್ಮ ಎಸ್ಟೇಟ್ ನಿಂದ ತಾತ್ಕಾಲಿಕವಾಗಿ ದಲಿತರಿಗೆ ಪೈಪ್ ಮೂಲಕ ನೀರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕುಡಿಯುವ ನೀರಿನ ಸಮಸ್ಯೆ ಆಗಿರುವ ಬಗ್ಗೆ ಪರಿಶಿಷ್ಟ ಜಾತಿಯ ನಿವಾಸಿಗಳು ದೂರಿದ ಕಾರಣಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕವೀಶ್, ಪಂಚಾಯಿತಿ ಉಪಾಧ್ಯಕ್ಷ ರಂಗನಾಥ್ ಜೊತೆ ಸ್ಥಳ ಪರಿಶೀಲನೆ ನಡೆಸಿದರು. ದೇವರಪಾಲಿನ ಕೃಷಿಕರೊಬ್ಬರು ನೀರಿನ ಹಕ್ಕಿನ ಬಗ್ಗೆ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಆದರೂ, ಪರಿಶಿಷ್ಟ ವರ್ಗದ ಕುಟುಂಬಗಳಿಗೆ ಸಿಗಬೇಕಾದ ನೀರಿನ ಬಗ್ಗೆ ಪಂಚಾಯಿತಿ ಪ್ರಾಮಾಣಿಕ ಯತ್ನ ನಡೆಸಿದೆ. ಪರಿಶಿಷ್ಟ ಜಾತಿಯ 20 ಕುಟುಂಬಗಳು ಇರುವ ಕಾಲೊನಿಗೆ ನೀರು ಪೂರೈಸಲು ಹೊಸದಾಗಿ ಪೈಪ್ ಲೈನ್ ಕಾಮಗಾರಿ ನಡೆಸಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ವಾರ ಕಳೆದರೂ ನೀರಿನ ಸಮಸ್ಯೆ ಪರಿಹರಿಸಲು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದಲಿತರು ಆರೋಪಿಸಿದ್ದಾರೆ.
ಜಯಪುರ: ಸ್ಪಂದನ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳ ವಿತರಣೆ
ಇದನ್ನೂ ಓದಿ; ಏರ್ ಇಂಡಿಯಾದಲ್ಲಿ 828 ಹುದ್ದೆಗಳು ಖಾಲಿ; ನೇರ ಸಂದರ್ಶನ ಮೂಲಕ ಆಯ್ಕೆ
ಶಾಲೆಯ ಮುಖ್ಯ ಶಿಕ್ಷಕಿ ಹುರ್ಮತ್ ಉನ್ನೀಸಾ ಮಾತನಾಡಿ, ಶಾಲೆಗೆ ಬರುವವರು ಬಹುತೇಕ ಬಡ ವಿದ್ಯಾರ್ಥಿಗಳು. ಕುಗ್ರಾಮದಲ್ಲಿರುವ ನಮ್ಮ ಶಾಲೆಯನ್ನು ಗುರುತಿಸಿ ಶೈಕ್ಷಣಿಕ ಪರಿಕರಗಳನ್ನು ನೀಡುತ್ತಿರುವುದಕ್ಕೆ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತಾವಿದ್ಯಾರ್ಥಿಗಳು ಈ ಬಾರಿ ಉತ್ತಮ ಅಂಕಗಳನ್ನು ಪಡೆಯುವತ್ತ ಗಮನ ಹರಿಸಬೇಕು ಹಾಗಾದಾಗ ಮಾತ್ರ ಸ್ಪಂದನ ಸಂಸ್ಥೆಯ ಕಾರ್ಯಕ್ಕೆ ಬೆಲೆ ಸಿಗುತ್ತದೆ ಎಂದರು.
ಇದನ್ನೂ ಓದಿ; ಚಿನ್ನದ ಬೆಲೆ ಏರಿಕೆ, ಬೆಳ್ಳಿ ತುಸು ಅಗ್ಗ; ಇಲ್ಲಿದೆ ಇವತ್ತಿನ ದರಪಟ್ಟಿ
ಕಾರ್ಯಕ್ರಮದಲ್ಲಿ ಸ್ಪಂದನ ಸಂಸ್ಥೆಯ ಸದಸ್ಯೆ ಡಾ. ಯಶಸ್ವಿನಿ ಕೃಷ್ಣ ಪ್ರಸಾದ್, ಜೇಸಿಐ ಬಿಳಾಲುಕೊಪ್ಪದ ಪೂರ್ವಾದ್ಯಕ್ಷ ಅರುಣ್ ಕುಮಾರ್, ಸಾಮಾಜಿಕ ಕಾರ್ಯಕರ್ತ ಸಂತೋಷ್ ಮೇಗೂರು ಹಾಗೂ ವಿದ್ಯಾರ್ಥಿಗಳು ಅದ್ಯಾಪಕರಿದ್ದರು.












