ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಸಂತೆ ಸೇರಿದಂತೆ ವಿವಿಧ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗೆ, ಹಸಿರು ತೋರಣ ಕಟ್ಟಿ ಹೂವಿನ ಹಾರಗಳಿಂದ ಸಿಂಗರಿಸುವ ಮೂಲಕ ರಸ್ತೆ ದುರಸ್ತಿಗೆ ವಿನೂತನ ಪ್ರತಿಭಟನೆ ಮಾಡಿದರು.
ಇದನ್ನೂ ಓದಿ; ಆಧಾರ್ ಕಾರ್ಡ್ ಅಪ್ಡೇಟ್ ಗೆ ಡೆಡ್‌ಲೈನ್!; ಮಾರ್ಚ್ 14 ವರೆಗೆ ಮಾತ್ರ ಅವಕಾಶ; ಅಪ್ಡೇಟ್ ಮಾಡಲು ಈ ದಾಖಲೆ ಕಡ್ಡಾಯ

ಸಂತೆ ಸುಭಾಸ್ ನಗರ, ಗುಡ್ಡಹಟ್ಟಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟು 20 ವರ್ಷಗಳೇ ಕಳೆದಿದೆ. ಆದರೆ, ಜನ ಪ್ರತಿನಿಧಿಗಳು ಇದರ ಬಗ್ಗೆ ಇದುವರೆಗೂ ಗಮನಹರಿಸಿಲ್ಲ. ಇದರಿಂದ ಬೇಸತ್ತ ಸುಭಾಷ್ ನಗರ ಗುಡ್ಡಹಟ್ಟಿ ಹಾಗೂ ಬಣಕಲ್ ಯುವಕರು ಇಂದು ರಸ್ತೆಗೆ ತೋರಣ ಕಟ್ಟಿ ರಸ್ತೆಯ ಮೇಲೆ ಹೂಗಳನ್ನು ಸುರಿದು ವಿಭಿನ್ನವಾಗಿ ಪ್ರತಿಭಟಿಸಿದರು.
ಇದನ್ನೂ ಓದಿ; ಇನ್ಸೂರೆನ್ಸ್ ಪ್ರೀಮಿಯಂ ಪಾವತಿಸಿದ ಕ್ಷಣದಿಂದಲೇ ವಿಮೆ ಜಾರಿಯಾಗುತ್ತದೆ: ಹೈಕೋರ್ಟ್
ಈ ಕುರಿತು ಮುಂಖಡರಾದ ವಿಕ್ರಂ ಗೌಡ ಮಾತನಾಡಿ, ಯಾವುದೇ ವ್ಯಕ್ತಿ, ರಾಜಕೀಯ ಪಕ್ಷ ಕುರಿತು ದ್ವೇಷಗಳಿಂದ ಪ್ರತಿಭಟನೆಗೆ ಮುಂದಾಗಿಲ್ಲ, ನಮಗೆ ಎಲ್ಲಾರೂ ಒಂದೇ, ಎಲ್ಲಾ ನಮ್ಮವರೇ. ನಮ್ಮ ಮೂಲ ಉದ್ದೇಶ ಜನಪ್ರತಿನಿಧಿಗಳ ಗಮನ ಸೆಳೆಯುವುದು ಮಾತ್ರವಾಗಿದೆ. ಈ ರಸ್ತೆಯನ್ನು ಮೂವತ್ತು ವರ್ಷಗಳಿಂದಲೂ ನಿರ್ಲಕ್ಷಿಸಲಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಹೊರ ಊರುಗಳಿಂದ ಬರುವ ನೆಂಟರಿಷ್ಟರು ನಮ್ಮನ್ನು ಅಣಕಿಸುವ ರೀತಿಯಲ್ಲಿದೆ. ಇಲ್ಲಿನ ಸ್ಥಿತಿಗತಿ ರಸ್ತೆಗೆ ಮೊದಲ ಆದ್ಯತೆ ನೀಡಿ ದುರಸ್ಥಿಗೊಳಿಸಿ ಎಂದು ಆಗ್ರಹಿಸಿದರು. (ವರದಿ- ತನು ಕೊಟ್ಟಿಗೆಹಾರ)
ಚಿಕ್ಕಮಗಳೂರು: ವಿಚಾರಣಾಧೀನ ಕೈದಿ ಅನುಮಾನಸ್ಪಾದ ಸಾವು
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವಿಚಾರಣಾಧೀನ ಕೈದಿಯೊಬ್ಬ ಮೃತಪಟ್ಟಿರುವ ಘಟನೆ ಬುಧವಾರ ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಸತೀಶ್ ಮೃತಪಟ್ಟ ಕೈದಿ.
ಇದನ್ನೂ ಓದಿ; ಪಿಎಂ ಕಿಸಾನ್ ಸಮ್ಮಾನ್ ಯೋಜನೆ; 16 ನೇ ಕಂತಿನ ಹಣ ಜಮಾ; ಹೀಗೆ ಚೆಕ್ ಮಾಡಿ
ದಾಯಾದಿಗಳ ಕಲಹ ಪ್ರಕರಣ ಸಂಬಂಧ 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಸತೀಶ್ ನನ್ನು ನಾಲ್ಕು ದಿನಗಳ ಹಿಂದೆ ಪೊಲೀಸರು ಬಂಧಿಸಿ ಜಿಲ್ಲಾ ಕಾರಾಗೃಹದಲ್ಲಿ ಇರಿಸಿದ್ದರು. ಕಾರಾಗೃಹಕ್ಕೆ ಬಂದ ದಿನವೇ ಅನಾರೋಗ್ಯ ಉಂಟಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗಿನ ಜಾವ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ; ಗೃಹಲಕ್ಷ್ಮೀ ಯೋಜನೆ; ಹಣ ಬಾರದೇ ಇರುವ ಮಹಿಳೆಯರಿಗೆ ಬಂಪರ್ ಸುದ್ದಿ ಕೊಟ್ಟ ಸರ್ಕಾರ!; ಏನದು? ಇಲ್ಲಿದೆ ಮಾಹಿತಿ
ಸತೀಶ್ ಸಾವಿನ ಗೆ ಪತ್ನಿ ನೇತ್ರಾ ಅನುಮಾನ ವ್ಯಕ್ತಪಡಿಸಿದ್ದಾರೆ. ಸತೀಶ್ ಕುತ್ತಿಗೆ, ಕೈ, ದೇಹದ ಇತರೆ ಭಾಗದಲ್ಲಿ ಗಾಯದ ಗುರುತುಗಳಿದ್ದು, ಕಾರಾಗೃಹದ ಸಿಬ್ಬಂದಿ ಮತ್ತು ಪೊಲೀಸರು ತೀವ್ರವಾಗಿ ಹಲ್ಲೆ ನಡೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಿಂದಾಗಿ ಸತೀಶ್ ಮೃತಪಟ್ಟಿದ್ದಾಗಿ ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ನ್ಯಾಯಾಧೀಶರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮೃತನ ಕುಟುಂಬದವರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.












