ಖಾಂಡ್ಯ: (ನ್ಯೂಸ್ ಮಲ್ನಾಡ್ ವರದಿ) ಚಿರತೆ ದಾಳಿಯಿಂದ ಕರುವೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ ಹುಯಿಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಗಣೆಯಲ್ಲಿ ನಡೆದಿದೆ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಮಹತ್ಚದ ಆದೇಶ; ಏನದು ಆದೇಶ?

ದನದ ಹಟ್ಟಿಯಲ್ಲಿ ಕಟ್ಟಿದ ಕರು ಮೇಲೆ ರಾತ್ರಿ ಚಿರತೆ ದಾಳಿ ಮಾಡಿ ಸಾಯಿಸಿದ್ದು, ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಆಸ್ತಿ ಮಾಲೀಕರ ಗಮನಕ್ಕೆ; ಇ-ಖಾತಾ ಇಲ್ಲದವರಿಗೆ ಬಿ-ಖಾತಾ ವಿತರಣೆ
ಸಾಕು ಪ್ರಾಣಿಗಳ ಮೇಲೆ ಹೆಚ್ಚಿದ ದಾಳಿ:
ಮಲೆನಾಡು ಭಾಗದಲ್ಲಿ ಮಾನವರ ಮೇಲೆ ಅಲ್ಲದೆ ಸಾಕು ಪ್ರಾಣಿಗಳ ಮೇಲೆ ಚಿರತೆ ಸೇರಿದಂತೆ ಕಾಡು ಪ್ರಾಣಿಗಳ ದಾಳಿ ಹೆಚ್ಚಾಗುತ್ತಿದ್ದು, ತೋಟ, ಹೊಲಕ್ಕೆ ಹೋಗಲು ಭಯ ಪಡುವಂತಾಗಿದೆ. ಒಟ್ಟಾರೆಯಾಗಿ ಚಿರತೆ ಹಾಗೂ ಕಾಡು ಪ್ರಾಣಿಗಳ ಹಾವಳಿ ಎಲ್ಲೆಡೆ ಹೆಚ್ಚಾಗ್ತಿದೆ. ಹೀಗಾಗಿ ಅರಣ್ಯ ಇಲಾಖೆ ತಡೆಯೊಡ್ಡಬೇಕಿದೆ.
ಇದನ್ನೂ ಓದಿ: ಪಿಯುಸಿ ಪಾಸ್ ಆದ ವಿದ್ಯಾರ್ಥಿನಿಯರಿಗೆ ಸ್ಕಾಲರ್ಶಿಪ್; ಎಷ್ಟು ಸ್ಕಾಲರ್ಶಿಪ್ ಲಭ್ಯ, ಅರ್ಜಿ ಸಲ್ಲಿಕೆ ಹೇಗೆ?












