ಶೃಂಗೇರಿ ಸೇರಿದಂತೆ ಈ ಭಾಗದಲ್ಲಿ ಮೂರು ದಿನ ಕರೆಂಟ್‌ ಇರಲ್ಲ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) 66ಕೆವಿ ಮುಗುಳುವಳ್ಳಿ -ಆಲ್ದೂರು-ಬಾಳೆಹೊನ್ನೂರು ಮಾರ್ಗದಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಿಗೆ ವಿದ್ಯುತ್ ಅಡಚಣೆಯಾಗುವುದರಿಂದ ಮೂರು ದಿನ ವಿದ್ಯುತ್ ವ್ಯತ್ಯಯವಾಗಲಿದೆ.


ಇದನ್ನೂ ಓದಿ: ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ; SC-ST ಸಮುದಾಯದವರು ಮಿಸ್‌ ಮಾಡ್ಡೆ ಈ ಸುದ್ದಿ ಓದಿ


ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯ ರೈಲ್ವೆ ಚೈನೇಜ್ ಸಂಖ್ಯೆ 45775-54880(9.1056.ಮೀ) ರೈಲ್ವೆ ಬ್ರಾಡ್ ಗೇಟ್ ಹಳಿ ಹಾಗೂ ಇದಕ್ಕೆ ಸಂಬಂದಿಸಿದಂತೆ ರೈಲ್ವೆ ಎಲೆಕ್ಟಿಫೀಕೇಷನ್ ಕಾರ್ಯವನ್ನು ರೈಲ್ವೆ ಇಲಾಖೆಯಿಂದ ನಿರ್ವಹಿಸುತ್ತಿದ್ದು, ಈ ಕಾಮಗಾರಿಗೆ 66 ಕೆವಿ ಮುಗುಳುವಳ್ಳಿ-ಆಲ್ದೂರು-ಬಾಳೆಹೊನ್ನೂರು ಮಾರ್ಗದಲ್ಲಿ ಮುಕ್ತತೆ ಅಗತ್ಯವಿರುವುದರಿಂದ 30.01.2025 ಗುರುವಾರದಿಂದ (ಇಂದಿನಿಂದ) 31.01.2025 ಮತ್ತು 01.02.2025 ಶನಿವಾರದ ವರೆಗೆ ಬೆಳಿಗ್ಗೆ 08:00 ರಿಂದ ಸಂಜೆ 06:00 ಯ ವರೆಗೆ ಬಾಳೆಹೊನ್ನೂರು, ಜಯಪುರ, ಶೃಂಗೇರಿ, ಕೊಪ್ಪ, ಕೋಡಿಹಿತ್ತು, ನ.ರಾ ಪುರ, ಗುಡ್ಡದೂರು, ಗುಲ್ಲನ್ ಪೇಟೆ, ಶಂಕರ್ ಫಾಲ್ಸ್, ಕಡಬಗೆರೆ, ನಾರಗೋಡು, ಕೆರೆಮಕ್ಕಿ, ಹಾಂದಿ, ಜೇನುಗದ್ದೆ, ಕಣತಿ, ಕಣ್ಣಿಮನೆ, ಕಳಸ-ಹೊರನಾಡು, ಬಾಳೆಹೊಳೆ, ಜಾವಳಿ ಮತ್ತು ಸಂಸೆ ಫೀಡರ್‌ಗಳಿಂದ ಸರಬರಾಜು ಆಗುವ ಸುತ್ತಮುತ್ತಲಿನ ಹಳ್ಳಿಗಳಲ್ಲೂ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.


ಇದನ್ನೂ ಓದಿ: 1000 VAO ಹುದ್ದೆಗಳಿಗೆ ಅಂತಿಮ ಆಯ್ಕೆಪಟ್ಟಿ ಪ್ರಕಟ; ಚೆಕ್‌ ಮಾಡುವ ವಿಧಾನ ಇಲ್ಲಿದೆ…


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.