ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ರಾಣಿಝರಿಗೆ ಸಾಗುವ ರಸ್ತೆಯಲ್ಲಿ ಬೈಕ್ ರೈಡರ್ ಗಳ ಹುಚ್ಚಾಟಕ್ಕೆ ಪ್ರವಾಸಿಗರು ಭಾನುವಾರ ಬೇಸತ್ತು ಹೋದರು.


ಮೊದಲೇ ಕೆಸರುಮಯವಾಗಿದ್ದ ರಾಣಿಝರಿಗೆ ಸಾಗುವ ರಸ್ತೆ ಬೈಕ್ ರೈಡರ್ ರೀಲ್ಸ್ ಹುಚ್ಚಿಗೆ ಮತ್ತಷ್ಟು ಹದೆಗೆಟ್ಟು ಹೋಗಿದೆ.

ಇದನ್ನೂ ಓದಿ: ಶ್ರಿ ರಾಮ್ ಫೈನಾನ್ಸ್ ಲಿಮಿಟೆಡ್ (BALEHONNUR) ವತಿಯಿಂದ ಸ್ಕಾಲರ್ ಶಿಪ್; ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂದೇ ಅರ್ಜಿ ಸಲ್ಲಿಸಿ
ಹೌದು, ದಕ್ಷಿಣ ಕನ್ನಡ ಮೂಲದ ಐದಾರು ಜನ ಯುವಕರು ಮೊದಲೇ ಕೆಸರುಮಯವಾಗಿದ್ದ ರಸ್ತೆಯಲ್ಲಿ ರೀಲ್ಸ್ ಹುಚ್ಚಿಗೆ 50 ಕ್ಕೂ ಹೆಚ್ಚು ಬಾರಿ ಕುಡಿದ ಮತ್ತಿನಲ್ಲಿ ಬೈಕ್ ವೀಲಿಂಗ್ ಮಾಡಿದ ಪರಿಣಾಮ ರಸ್ತೆಯೇ ಹದೆಗೆಟ್ಟು ಹೋಗಿದೆ. ಅರ್ಧಗಂಟೆಗೂ ಹೆಚ್ಚು ಕಾಲ ಯುವಕರು ಹುಚ್ಚಾಟ ನಡೆಸಿದರೂ ಸಹ ಹೇಳೋರಿಲ್ಲ, ಕೇಳೋರಿಲ್ಲ ಎಂಬಾಂತಾಗಿತ್ತು. (ವರದಿ- ತನು ಕೊಟ್ಟಿಗೆಹಾರ)













