ಚಾರ್ಮಾಡಿ ಘಾಟ್ ನಲ್ಲಿ ಮರುಕಳಿಸುತ್ತಿರುವ ಪ್ರವಾಸಿಗರ ಹುಚ್ಚಾಟ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಾರ್ಮಾಡಿ ಘಾಟ್ ನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜಲಪಾತಗಳು ಜೀವಕಳೆ ತುಂಬಿಕೊಂಡು ಬೋರ್ಗರೆಯುತ್ತಿವೆ. ಆದರೂ ಪ್ರವಾಸಿಗರು ಮಾತ್ರ ಅಪಾಯದ ಜಲಪಾತದ ಕಲ್ಲುಗಳನ್ನು ಏರಿ ಸೆಲ್ಫಿ ಪೋಟೋ ತೆಗೆದು ಹುಚ್ಚಾಟ ಮೆರೆಯುತ್ತಿದ್ದಾರೆ.


ಇದನ್ನೂ ಓದಿ: 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್


ಕಳೆದ ಬಾರಿ ಚಾರ್ಮಾಡಿ ಘಾಟಿಯಲ್ಲೇ ಪ್ರವಾಸಿಗರ ಯುವಕರು ಬಟ್ಟೆಗಳನ್ನೆಲ್ಲಾ ಬಿಚ್ಚಿ ಸ್ನಾನ ಮಾಡುತ್ತಿದ್ದರು. ಇದನ್ನು ನೋಡಿದ ಪೊಲೀಸರು ಅಪಾಯದ ಜಲಪಾತಗಳಲ್ಲಿ ಸ್ನಾನ ಮಾಡುತ್ತಿದ್ದವರ ಬಟ್ಟೆ ಹೊತ್ತುಕೊಂಡು ಯುವಕರಿಗೆ ತಿಳಿಹೇಳಿ ಕಳುಹಿಸಿದ್ದರು. ಅದು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿತ್ತು. ಆದರೂ ಪ್ರವಾಸಿಗರು ಅಪಾಯದ ಸಾಹಸ ಮಾಡುವುದು ಕಡಿಮೆಯಾಗಿಲ್ಲ.


ಇದನ್ನೂ ಓದಿ: ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ


ಶನಿವಾರ, ಭಾನುವಾರ ಹೆಚ್ಚು ಪ್ರವಾಸಿಗರು ಚಾರ್ಮಾಡಿ ಘಾಟಿಯಲ್ಲಿ ಮೋಜುಮಸ್ತಿ ಮಾಡುತ್ತಾರೆ. ಪೊಲೀಸರು ಎಷ್ಟು ಗಸ್ತು ತಿರುಗುತ್ತಿದ್ದರೂ ಅವರ ಕಣ್ಣು ತಪ್ಪಿಸಿ ಜಲಪಾತ ಏರುವುದು, ಅಪಾಯದ ತಡೆಗೋಡೆ ಮೇಲೆ ನಿಂತು ಸೆಲ್ಫಿ ತೆಗೆಯುವುದು ನಡೆಯುತ್ತಲೇ ಇದೆ. ಮಳೆಗಾಲದ ಸಂದರ್ಭದಲ್ಲಿ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ನಿಂತು ಅಸ್ವಾಧಿಸುವುದರ ಬದಲು ಜೀವಕ್ಕೆ ಅಪಾಯ ತರಿಸುವ ಕೆಲಸ ನಿಲ್ಲಿಸಬೇಕು ಎಂದು ಎಲ್ಲರ ಆಗ್ರಹವಾಗಿದೆ.


ಇದನ್ನೂ ಓದಿ: ಬಿಪಿಎಲ್‌ ರೇಷನ್‌ ಕಾರ್ಡ್‌ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?


ಇನ್ನಾದರೂ ಪ್ರವಾಸಿಗರು ಎಚ್ಚೆತ್ತು ಮಳೆಗಾಲದಲ್ಲಿ ಚಾರ್ಮಾಡಿ ಘಾಟ್ ನಲ್ಲಿ ಮೋಜುಮಸ್ತಿ ನಿಲ್ಲಿಸಬೇಕು. ನಿಯಮ ಪಾಲಿಸದಿದ್ದರೆ ಅಂತವರ ಮೇಲೆ ಸೂಕ್ತಕ್ರಮ ಜರುಗಿಸಲಾಗುವುದು ಎಂದು ಬಣಕಲ್ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಡಿ. ವಿ ರೇಣುಕಾ ತಿಳಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)


ಇದನ್ನೂ ಓದಿ: 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.