ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಮಳೆ ಸುರಿದಾಗಲೆಲ್ಲ ಕೃತಕ ಜಲಪಾತಗಳು ಸೃಷ್ಟಿಯಾಗುತ್ತವೆ. ಅವು ನೋಡಲಷ್ಟೇ ಚಂದ ಮತ್ತು ದೂರದಿಂದ ಸೆಲ್ಫಿಗಳನ್ನು ತೆಗೆದುಕೊಂಡರೂ ಅಡ್ಡಿಯಿಲ್ಲ. ಆದರೆ ಪ್ರವಾಸಕ್ಕೆ ಬಂದಿರುವವರು ಜಾರುವ ಬಂಡೆಗಳ ಮೇಲೆ ನಿಂತು ಚೆಲ್ಲಾಟವಾಡುತ್ತಿದ್ದಾರೆ.

ಪೊಲೀಸ್ ಇಲಾಖೆ ಅಪಾಯಕಾರಿ ಸ್ಥಳಗಳಿಗೆ ತೆರಳದಂತೆ ಮನವಿ ಮಾಡಿದ್ದರೂ ಕೂಡ ಪ್ರವಾಸಿಗರ ಮೋಜುಮಸ್ತಿ ನಿಂತಿಲ್ಲ. ಹೀಗಾಗಿ 6 ಪ್ರವಾಸಿಗರ ಮೇಲೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಶ್ರಿ ರಾಮ್ ಫೈನಾನ್ಸ್ ಲಿಮಿಟೆಡ್ (BALEHONNUR) ವತಿಯಿಂದ ಸ್ಕಾಲರ್ ಶಿಪ್; ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂದೇ ಅರ್ಜಿ ಸಲ್ಲಿಸಿ
ಮಂಗಳೂರು ಮೂಲದ ಪ್ರವಾಸಿಗರು ಮೂಡಿಗೆರೆ ತಾಲೂಕಿನ ಮೈದಾಡಿ ರಸ್ತೆಯಲ್ಲಿರುವ ಕಿರು ಜಲಪಾತದಲ್ಲಿ ಮೋಜುಮಸ್ತಿ ಮಾಡುತ್ತಿದ್ದ 6 ಜನ ಯುವಕರ ವಿರುದ್ಧ ಬಾಳೂರು ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ಇನ್ಮುಂದೆ ಈ ಮಹಿಳೆಯರಿಗೆ ಬರಲ್ಲ ಗೃಹಲಕ್ಷ್ಮಿ ಹಣ; ಕಾರಣ ಏನು ಗೊತ್ತಾ?












