
ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಕಳೆದ ಮೂರು ನಾಲ್ಕು ತಿಂಗಳಿನಲ್ಲಿ ಮಲೆನಾಡು ಭಾಗದಲ್ಲಿ ಕಾಡಾನೆ ದಾಳಿಗೆ ಜೀವಹಾನಿಯಾಗಿದ್ದಲ್ಲದೆ ಫಸಲು ಭರಿತ ಬೆಳೆಗಳನ್ನು ನಾಶ ಮಾಡಿದೆ.
ಇದನ್ನೂ ಓದಿ: ಈ ಬಾರಿ 10th ಪರೀಕ್ಷೆಯಲ್ಲಿ ಹೊಸ ರೂಲ್ಸ್!; ವಿದ್ಯಾರ್ಥಿಗಳಿಗೆ ಈ ನಿಯಮ ಕಡ್ಡಾಯ ಅಂದ್ರು ಶಿಕ್ಷಣ ಸಚಿವ

ಇದೀಗ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನ ಗುಬ್ಬಿಗಾ ಗ್ರಾಮದ ಬಳಿ ತೋಟಕ್ಕೆ ಕಾಡಾನೆ ದಾಳಿ ನಡೆಸಿ ಫಸಲು ಭರಿತ ಅಡಿಕೆ ಮರ, ಬಾಳೆ, ಕಾಫಿ ಗಿಡ ಹಾಗೂ ಪೈಪ್ ಲೈನ್ ಗಳನ್ನ ನಾಶ ಪಡಿಸಿದೆ. ಈ ಕಾಡಾನೆ ದಾಳಿ ವೇಳೆ ತೋಟದಲ್ಲಿ ರೈತರಿದಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಡಾನೆ ದಾಳಿಗೆ ಬೇಕು ಅಂಕುಶ:
ಕಾಡಾನೆ ದಾಳಿಯಿಂದ ಕೃಷಿಕರು, ಜನಸಾಮಾನ್ಯರು ಕಂಗಾಲಾಗಿದ್ದಾರೆ. ಎನ್. ಆರ್. ಪುರ, ಬಾಳೆಹೊನ್ನೂರು, ಖಾಂಡ್ಯ, ಕೊಪ್ಪ, ಆಲ್ದೂರು, ಮೂಡಿಗೆರೆ ಸೇರಿದಂತೆ ಇನ್ನಿತರ ಭಾಗದಲ್ಲಿ ಕಾಡಾನೆ ದಾಳಿ ಹೆಚ್ಚಾಗುತ್ತಿದ್ದು, ಜನರು ನಿತ್ಯವೂ ಭಯದಲ್ಲೇ ಜೀವನ ಕಳೆಯುವಂತೆ ಆಗಿದೆ. ಜನವಸತಿ ಪ್ರದೇಶಗಳತ್ತ ವಕ್ಕರಿಸುತ್ತಿರುವ ಕಾಡಾನೆಗಳು ಜನರನ್ನು ಭೀತಿಗೆ ತಳ್ಳುತ್ತಿವೆ. ಅರಣ್ಯದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ದಂಡು ಇದೀಗ ಹಗಲಲ್ಲೇ ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿದ್ದು, ಭೀತಿ ತಂದೊಡ್ಡಿದೆ. ಹಲವು ತೋಟಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಕೃಷಿ ನಾಶಕ್ಕೆ ಕಾರಣವಾಗಿರುವ ಕಾಡಾನೆಗಳ ಕಾಟಕ್ಕೆ ಅಂಕುಶ ಹಾಕಬೇಕಾದ ಅಗತ್ಯವಿದೆ.
ಇದನ್ನೂ ಓದಿ: ಜಮೀನು ಸರ್ವೆಯಲ್ಲಿ ಬದಲಾವಣೆ;ಇನ್ಮುಂದೆ 10 ನಿಮಿಷದಲ್ಲಿ ಮುಗಿಯಲಿದೆ ಲ್ಯಾಂಡ್ ಸರ್ವೆ; ಈ ಕುರಿತು ಕಂದಾಯ ಸಚಿವ ಹೇಳಿದ್ದೇನು?
ಸರ್ಕಾರದಿಂದ ಸಿಗುತ್ತಿಲ್ಲ ಸ್ಪಂದನೆ!:
ಜಿಲ್ಲೆಯ ಅಲ್ಲಲ್ಲಿ ಭಾರಿ ಪ್ರಮಾಣದಲ್ಲಿ ಕಾಡಾನೆ ಹಾವಳಿ ಇದ್ದರೂ ಸರ್ಕಾರ ಮಾತ್ರ ಸ್ಪಂದಿಸುತ್ತಿಲ್ಲ ಎಂಬುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಕಾಡಾನೆ ದಾಳಿಯಿಂದ ಜೀವ ಹಾನಿಗೆ ಪರಿಹಾರದ ಚೆಕ್ ಮತ್ತು ಸುಳ್ಳು ಭರವಸೆ ಬಿಟ್ಟರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಸರ್ಕಾರ, ಅರಣ್ಯ ಇಲಾಖೆ ಹಾಗೂ ಶಾಸಕರ ವಿರುದ್ಧ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಕ್ರಮ ಪಂಪ್ ಸೆಟ್ ಹೊಂದಿರುವವರಿಗೆ ಇಂಧನ ಸಚಿವ ಕೊಟ್ರು ಸಿಹಿಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ













