ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಲೋಕಸಭಾ ಚುನಾವಣೆ ಹಿನ್ನಲೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜ್ಯಾದ್ಯಂತ ಚೆಕ್ ಪೋಸ್ಟ್ ಗಳು ಕಾರ್ಯ ನಿರ್ವಹಿಸುತ್ತಿವೆ. ಇದರ ಬೆನ್ನಲ್ಲೇ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ 78 ಸಾವಿರ ದಾಖಲೆ ರಹಿತ ಹಣವನ್ನು ಶುಕ್ರವಾರ ಪೊಲೀಸರು ಹಾಗೂ SST ಸಿಬ್ಬಂದಿ ವಶ ಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ; ಗುಪ್ತಚರ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; 660 ಹುದ್ದೆಗಳಿಗೆ ಅರ್ಜಿ ಆಹ್ವಾನ; SSLC ತೇರ್ಗಡೆಯಾದವರೂ ಅರ್ಜಿ ಸಲ್ಲಿಸಿ

ದ.ಕ.ಜಿಲ್ಲೆಯ ಉಜಿರೆಯಿಂದ ಚಾರ್ಮಾಡಿ ಮಾರ್ಗವಾಗಿ ಬೆಂಗಳೂರಿಗೆ ಸಾಗುತ್ತಿದ್ದ ಇನೋವಾ ಕಾರನ್ನು ಪೊಲೀಸರು ತಪಾಸಣೆ ಮಾಡಿದಾಗ ಶಿವನ್ ಹಾಗೂ ಓಮನ ಅವರಿಂದ ಒಟ್ಟು 75 ಸಾವಿರ ದಾಖಲೆ ರಹಿತ ಹಣವನ್ನು ವಶಪಡಿಸಿ ಮೂಡಿಗೆರೆ ತಾಲೂಕು ದಂಡಾಧಿಕಾರಿಯವರ ಕಚೇರಿಯ ಸರ್ಕಾರಿ ಖಜಾನೆಗೆ ಒಪ್ಪಿಸಲಾಗಿದೆ.


ಕಾರ್ಯಾಚರಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಗಳಾದ ಬಿ.ಸಿ ಕೌಶಿಕ್, ಎನ್.ಕೆ ಓಮನ, ಪೊಲೀಸ್ ಸಿಬ್ಬಂದಿ ಜಗದೀಶ್, ಲಕ್ಷ್ಮಣ್ ಗೌಡ, ಬಿ.ಎಸ್ ವರ್ಷಿಣಿ, ಎಸ್.ಎಸ್.ಟಿ ತಂಡದ ಶಿವಕುಮಾರ್, ಚುನಾವಣಾ ಅಧಿಕಾರಿಗಳಾದ ಮರುಳಸಿದ್ದಪ್ಪ, ಯಶವಂತ್, ವೀಡಿಯೋ ಗ್ರಾಫರ್ ಹರೀಶ್ ಇದ್ದರು.
ಇದನ್ನೂ ಓದಿ; ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯಲ್ಲಿ ಉದ್ಯೋಗ; ಕಮ್ಯುನಿಕೇಶನ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
ಚೆಕ್ ಪೋಸ್ಟ್ ಗಳಲ್ಲಿ ತನಿಖೆಗೆ ಸಾರ್ವಜನಿಕರು ಸಹಕರಿಸಬೇಕು:
ಚುನಾವಣೆಗಾಗಿ ಎಲ್ಲಾ ಕಡೆ ಚೆಕ್ ಪೋಸ್ಟ್ ತೆರೆದಿದ್ದರೂ ಕೂಡ ಪ್ರಯಾಣಿಕರು, ಪ್ರವಾಸಿಗರು ನಿಯಮ ಗಾಳಿಗೆ ತೂರಿ ತಮ್ಮ ಕೈಯಲ್ಲಿ ಹೆಚ್ಚು ಹೆಚ್ಚು ಹಣವನ್ನು ತರುವುದು ಗಮನಕ್ಕೆ ಬರುತ್ತಿದೆ. ಚುನಾವಣೆ ಸಂದರ್ಭದಲ್ಲಿ ಪ್ರಯಾಣಿಕರು, ಪ್ರವಾಸಿಗರು ತಮ್ಮ ಕೈಯಲ್ಲಿ 50 ಸಾವಿರಕ್ಕಿಂತಲೂ ಕಡಿಮೆ ಹಣ ಖರ್ಚಿಗೆ ತಕ್ಕ ದಾಖಲೆಯಿದ್ದ ಹಣವನ್ನು ಮಾತ್ರ ಇಟ್ಟುಕೊಳ್ಳಬೇಕು. ನಿಯಮ ಗೊತ್ತಿದ್ದರೂ ಹೆಚ್ಚು ಹೆಚ್ಚು ಹಣ ತಂದು ತೊಂದರೆಗೆ ಒಳಗಾಗಬಾರದು. ಪೊಲೀಸರು ಹಾಗೂ ಚುನಾವಣಾಧಿಕಾರಿಗಳೊಂದಿಗೆ ತನಿಖೆಗೆ ಸಹಕರಿಸುವಂತೆ ಬಣಕಲ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಬಿ.ಸಿ.ಕೌಶಿಕ್ ತಿಳಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ; ಈಗಷ್ಟೇ 18 ಆದವರಿಗೆ ಚುನಾವಣಾ ಆಯೋಗದಿಂದ ಬರ್ತ್ಡೇ ಗಿಫ್ಟ್; ಏನದು? ಇಲ್ಲಿದೆ ನೋಡಿ ಡಿಟೈಲ್ಸ್
ಚಿಕ್ಕಮಗಳೂರು: ಏರ್ ಗನ್ ನಲ್ಲಿ ಶೂಟ್ ಮಾಡಿಕೊಂಡು 7 ವರ್ಷದ ಬಾಲಕ ಸಾವು
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಏರ್ ಗನ್ ನಲ್ಲಿ ಶೂಟ್ ಮಾಡಿಕೊಂಡು 7 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿಷ್ಣು ಮೃತ ದುರ್ದೈವಿ.
ಇದನ್ನೂ ಓದಿ; ಈ ದಿನ ಆಧಾರ್ ಅಪ್ಡೇಟ್ ಮಾಡಲು ಕೊನೆಯ ದಿನ; ಅಪ್ಡೇಟ್ ಮಾಡುವುದು ಹೇಗೆ? ಇಲ್ಲಿದೆ ಡಿಟೈಲ್ಸ್
ಕಾಫಿ ತೋಟದಲ್ಲಿ ಮಂಗಗಳನ್ನ ಓಡಿಸಲು ಬಳಸುವ ಏರ್ ಗನ್ ಜೊತೆ ವಿಷ್ಣು ಮನೆ ಮುಂದೆ ಆಟವಾಡುತ್ತಿದ್ದ. ಈ ವೇಳೆ ವಿಷ್ಣು ಟ್ರಿಗರ್ ಒತ್ತಿದ್ದಾನೆ. ಪರಿಣಾಮ ಏರ್ ಗನ್ ಫೈರ್ ಆಗಿದ್ದು, ನೇರವಾಗಿ ಗನ್ ನೊಳಗಿದ್ದ ಬಾಲ್ಸ್ ವಿಷ್ಣುವಿನ ಹೃದಯ ಭಾಗಕ್ಕೆ ಹೊಕ್ಕಿದೆ. ಪೋಷಕರು ಮನೆಯಲ್ಲಿ ಇದ್ದಾಗಲೇ ಈ ದುರ್ಘಟನೆ ನಡೆದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ; ಗ್ರಾಮ ಪಂಚಾಯಿತಿಯಲ್ಲೇ ಸಿಗಲಿದೆ ಇ-ಶ್ರಮ ಕಾರ್ಡ್; ಕೆಲಸದ ಭದ್ರತೆ ಸೇರಿದಂತೆ 2 ಲಕ್ಷ ರೂ.ವರೆಗೆ ವಿಮೆ ಸೌಲಭ್ಯ
ಈ ಬಗ್ಗೆ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













