ಶೃಂಗೇರಿ, ಜಯಪುರ BGS ಪದವಿ ಪೂರ್ವ ಕಾಲೇಜಿಗೆ 100% ಫಲಿತಾಂಶ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಪಟ್ಟಣದ ಬಿ.ಜಿ.ಎಸ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಒಟ್ಟು 162 ವಿದ್ಯಾರ್ಥಿಗಳು ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು ಬರೆದಿದ್ದು, ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿ 100 ಪ್ರತಿಶತ ಫಲಿತಾಂಶವನ್ನು ನೀಡಿದ್ದಾರೆ.

 

ಇದನ್ನೂ ಓದಿ; ಈ ದಿನ ಆಧಾರ್ ಅಪ್ಡೇಟ್ ಮಾಡಲು ಕೊನೆಯ ದಿನ; ಅಪ್ಡೇಟ್ ಮಾಡುವುದು ಹೇಗೆ? ಇಲ್ಲಿದೆ ಡಿಟೈಲ್ಸ್

162 ವಿದ್ಯಾರ್ಥಿಗಳಲ್ಲಿ 96 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಇನ್ನುಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 56 ಹಾಗೂ ವಾಣಿಜ್ಯ ವಿಭಾಗದಲ್ಲಿ 40 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಇದನ್ನೂ ಓದಿ; ಗ್ರಾಮ ಪಂಚಾಯಿತಿಯಲ್ಲೇ ಸಿಗಲಿದೆ ಇ-ಶ್ರಮ ಕಾರ್ಡ್‌; ಕೆಲಸದ ಭದ್ರತೆ ಸೇರಿದಂತೆ 2 ಲಕ್ಷ ರೂ.ವರೆಗೆ ವಿಮೆ ಸೌಲಭ್ಯ

ವಿಜ್ಞಾನ ವಿಭಾಗದಲ್ಲಿ ಶಮಾ.ಎಸ್.ಶೆಟ್ಟಿ – 587 ಅಂಕಗಳನ್ನು ಪಡೆದಿದ್ದು (98.83%)ನೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ 10ನೇ ರ‍್ಯಾಂಕ್ ಪಡೆದಿದ್ದಾರೆ. ಸಮೃದ್ಧಿ ಎನ್.ಎಸ್- 583 ಹಾಗೂ ಆಶೀರ್ವಾದ್ ಮತ್ತು ರಾಮಕೃಷ್ಣ- 576 ಅಂಕದೊಂದಿಗೆ ಕಾಲೇಜಿಗೆ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 78.42% ಅತ್ಯುನ್ನತ ಶ್ರೇಣಿ ಬಂದಿದ್ದು, ಮೈಥಿಲಿ 591(98.5%) ಪಡೆದು ಕಾಲೇಜಿಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ರ‍್ಯಾಂಕ್ ಪಡೆದಿದ್ದಾಳೆ. ಪ್ರಾರ್ಥನಾ.ಪಿ-581(96.83%) ಹಾಗೂ ಹರ್ಷಿತಾ ಎಂ -579(96.5%)ನೊಂದಿಗೆ ಕಾಲೇಜಿಗೆ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ; ನಿಮ್ಮ ಖಾತೆಗೆ ಬೆಳೆ ವಿಮೆ ಹಣ ಜಮಾ ಆಗಿದ್ಯಾ?; ಈ ರೀತಿ ಚೆಕ್ ಮಾಡಿ

ಕಾಲೇಜಿನಲ್ಲಿ ಗಣಿತದಲ್ಲಿ-3, ಜೀವಶಾಸ್ತ್ರದಲ್ಲಿ -3, ಗಣಕ ವಿಜ್ಞಾನ -2, ಅರ್ಥಶಾಸ್ತ್ರ- 2, ಸಂಖ್ಯಾಶಾಸ್ತ್ರ-1 ಮತ್ತು ಕನ್ನಡದಲ್ಲಿ ಒಬ್ಬ ವಿದ್ಯಾರ್ಥಿ 100ಕ್ಕೆ 100 ಅಂಕ ಪಡೆದಿದ್ದು, ಉತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳನ್ನು ಮತ್ತು ಉಪನ್ಯಾಸಕರನ್ನು ಸಂಸ್ಥೆಯ ಕಾರ್ಯದರ್ಶಿಗಳು, ಪ್ರಾಚಾರ್ಯರು ಅಭಿನಂದಿಸಿದ್ದಾರೆ.

ಜಯಪುರದ ಬಿಜಿಎಸ್ ನಲ್ಲೂ 100% ಫಲಿತಾಂಶ:
ಜಯಪುರದ ಬಿಜಿಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತಿಯ ಪಿಯುಸಿ ಕಲಾ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 100% ಫಲಿತಾಂಶವನ್ನು ಪಡೆದಿದೆ.

ಕಲಾ ವಿಭಾಗದಲ್ಲಿ ಪಲ್ಲವಿ ಕೆ ಎನ್ 547 ಅಂಕ 91.16% ಫಲಿತಾಂಶ ಪಡೆದು ಕಲಾ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸಂಜನಾ ಎಸ್.ಎಸ್ 516 ಅಂಕ 86% ಫಲಿತಾಂಶ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ದೀಕ್ಷಿತ್ ಸಿ. ಡಿ 471 ಅಂಕ 78.5% ಫಲಿತಾಂಶ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶೇ 98.24% ಫಲಿತಾಂಶವನ್ನು ಪಡೆದಿದೆ. ಅಧಿತಿ ಸಿ ಶೇಟ್ 568 ಅಂಕ 94.66% ಫಲಿತಾಂಶ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದು, ಸಚಿನ್ ಎನ್. ವಿ 559 ಅಂಕ 93.16% ಫಲಿತಾಂಶ ಪಡೆದು ದ್ವೀತಿಯ ಸ್ಥಾನ ಪಡೆದಿದ್ದಾರೆ. ದೀಕ್ಷಿತಾ ಡಿ 554 ಅಂಕ 92.33% ಫಲಿತಾಂಶ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಪ್ರಾಂಶುಪಾಲ ಮುರುಳಿಧರ್ ತಿಳಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.