ಎನ್.ಆರ್ ಪುರ: ತೋಟಕ್ಕೆ ಹೋಗಿದ್ದ ರೈತನಿಗೆ ಸಿಡಿಲು ಬಡಿದು ಸಾವು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿನ್ನೆ ಮಳೆ ಸುರಿದಿದ್ದು, ಬಿರುಬೇಸಿಗೆಯಿಂದ ಕಾದ ಕಾವಲಿಯಂತಾಗಿದ್ದ ಭೂಮಿಗೆ ತಂಪೆರೆದಿದೆ. ಇದರ ನಡುವೆ ಮಲೆನಾಡಿನಲ್ಲಿ ಸಿಡಿಲಿಗೆ ರೈತ ಬಲಿಯಾಗಿದ್ದಾರೆ.

 

ಇದನ್ನೂ ಓದಿ; HSRP ನಂಬರ್ ಪ್ಲೇಟ್ ಅಳವಡಿಕೆ; ವಾಹನ ಸವಾರರಿಗೆ ಮಹತ್ವದ ಮಾಹಿತಿ ಇಲ್ಲಿದೆ!

ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಅರಳಿಕೊಪ್ಪದಲ್ಲಿ ತೋಟಕ್ಕೆ ತೆರಳಿದ್ದ ರೈತನಿಗೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಶಂಕರ್ (48) ಸಿಡಿಲು ಬಡಿದು ಮೃತಪಟ್ಟ ದುರ್ದೈವಿ.

ಇದನ್ನೂ ಓದಿ; SBI ಅಮೃತ್‌ ಕಲಶ್‌ ಎಫ್‌ಡಿ ಸ್ಕೀಮ್‌; ಹೂಡಿಕೆ ಗಡುವು ವಿಸ್ತರಿಸಿದ ಎಸ್‌ಬಿಐ; ಈ ಯೋಜನೆಯಲ್ಲಿ ಏನೆಲ್ಲಾ ಲಾಭ? ಇಲ್ಲಿದೆ ಡಿಟೈಲ್ಸ್

ಮೂಡಿಗೆರೆ, ಕೊಪ್ಪ, ಜಯಪುರ, ಬಾಳೆಹೊನ್ನೂರಲ್ಲಿ ಧಾರಾಕಾರ ಮಳೆಯಾಗಿದ್ದು, ಚಿಕ್ಕಮಗಳೂರು ನಗರ, ಮಲ್ಲೇನಹಳ್ಳಿ, ಖಾಂಡ್ಯ, ಮುತ್ತೋಡಿ ಭಾಗದಲ್ಲಿ 3 ದಿನಗಳಿಂದ ಸಂಜೆ ವೇಳೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಬಿಸಿಲ ಝಳಕ್ಕೆ ಕಂಗಲಾಗಿದ್ದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಇದನ್ನೂ ಓದಿ; ಎಲೆಕ್ಟ್ರಾನಿಕ್ಸ್​ ಕಾರ್ಪೊರೇಷನ್ ಆಫ್​ ಇಂಡಿಯಾ ಲಿಮಿಟೆಡ್ ನಲ್ಲಿ ಉದ್ಯೋಗ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೂಡಿಗೆರೆ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 78 ಸಾವಿರ ಹಣ ವಶಕ್ಕೆ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಲೋಕಸಭಾ ಚುನಾವಣೆ ಹಿನ್ನಲೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜ್ಯಾದ್ಯಂತ ಚೆಕ್ ಪೋಸ್ಟ್ ಗಳು ಕಾರ್ಯ ನಿರ್ವಹಿಸುತ್ತಿವೆ. ಇದರ ಬೆನ್ನಲ್ಲೇ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ 78 ಸಾವಿರ ದಾಖಲೆ ರಹಿತ ಹಣವನ್ನು ಶುಕ್ರವಾರ ಪೊಲೀಸರು ಹಾಗೂ SST ಸಿಬ್ಬಂದಿ ವಶ ಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ; ಗುಪ್ತಚರ ಇಲಾಖೆಯಲ್ಲಿ ಭರ್ಜರಿ ಜಾಬ್ ಆಫರ್; 660 ಹುದ್ದೆಗಳಿಗೆ ಅರ್ಜಿ ಆಹ್ವಾನ; SSLC ತೇರ್ಗಡೆಯಾದವರೂ ಅರ್ಜಿ ಸಲ್ಲಿಸಿ

ದ.ಕ.ಜಿಲ್ಲೆಯ ಉಜಿರೆಯಿಂದ ಚಾರ್ಮಾಡಿ ಮಾರ್ಗವಾಗಿ ಬೆಂಗಳೂರಿಗೆ ಸಾಗುತ್ತಿದ್ದ ಇನೋವಾ ಕಾರನ್ನು ಪೊಲೀಸರು ತಪಾಸಣೆ ಮಾಡಿದಾಗ ಶಿವನ್ ಹಾಗೂ ಓಮನ ಅವರಿಂದ ಒಟ್ಟು 75 ಸಾವಿರ ದಾಖಲೆ ರಹಿತ ಹಣವನ್ನು ವಶಪಡಿಸಿ ಮೂಡಿಗೆರೆ ತಾಲೂಕು ದಂಡಾಧಿಕಾರಿಯವರ ಕಚೇರಿಯ ಸರ್ಕಾರಿ ಖಜಾನೆಗೆ ಒಪ್ಪಿಸಲಾಗಿದೆ.

ಇದನ್ನೂ ಓದಿ; ಬೇರೊಬ್ಬರ ಭೂಮಿಯಲ್ಲಿ ಕೃಷಿ ಮಾಡುತ್ತಿರುವವರು ಪಿಎಂ ಕಿಸಾನ್‌ ಹಣ ಪಡೆಯಬಹುದೇ? ; ಈ ಯೋಜನೆಯ ಲಾಭ ಯಾರು ಪಡೆಯಬಹುದು!, ಇಲ್ಲಿದೆ ಮಾಹಿತಿ

ಕಾರ್ಯಾಚರಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಗಳಾದ ಬಿ.ಸಿ ಕೌಶಿಕ್, ಎನ್.ಕೆ ಓಮನ, ಪೊಲೀಸ್ ಸಿಬ್ಬಂದಿ ಜಗದೀಶ್, ಲಕ್ಷ್ಮಣ್ ಗೌಡ, ಬಿ.ಎಸ್ ವರ್ಷಿಣಿ, ಎಸ್.ಎಸ್.ಟಿ ತಂಡದ ಶಿವಕುಮಾರ್, ಚುನಾವಣಾ ಅಧಿಕಾರಿಗಳಾದ ಮರುಳಸಿದ್ದಪ್ಪ, ಯಶವಂತ್, ವೀಡಿಯೋ ಗ್ರಾಫರ್ ಹರೀಶ್ ಇದ್ದರು.

ಇದನ್ನೂ ಓದಿ; ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯಲ್ಲಿ ಉದ್ಯೋಗ; ಕಮ್ಯುನಿಕೇಶನ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ಚೆಕ್ ಪೋಸ್ಟ್ ಗಳಲ್ಲಿ ತನಿಖೆಗೆ ಸಾರ್ವಜನಿಕರು ಸಹಕರಿಸಬೇಕು:
ಚುನಾವಣೆಗಾಗಿ ಎಲ್ಲಾ ಕಡೆ ಚೆಕ್ ಪೋಸ್ಟ್ ತೆರೆದಿದ್ದರೂ ಕೂಡ ಪ್ರಯಾಣಿಕರು, ಪ್ರವಾಸಿಗರು ನಿಯಮ ಗಾಳಿಗೆ ತೂರಿ ತಮ್ಮ ಕೈಯಲ್ಲಿ ಹೆಚ್ಚು ಹೆಚ್ಚು ಹಣವನ್ನು ತರುವುದು ಗಮನಕ್ಕೆ ಬರುತ್ತಿದೆ. ಚುನಾವಣೆ ಸಂದರ್ಭದಲ್ಲಿ ಪ್ರಯಾಣಿಕರು, ಪ್ರವಾಸಿಗರು ತಮ್ಮ ಕೈಯಲ್ಲಿ 50 ಸಾವಿರಕ್ಕಿಂತಲೂ ಕಡಿಮೆ ಹಣ ಖರ್ಚಿಗೆ ತಕ್ಕ ದಾಖಲೆಯಿದ್ದ ಹಣವನ್ನು ಮಾತ್ರ ಇಟ್ಟುಕೊಳ್ಳಬೇಕು. ನಿಯಮ ಗೊತ್ತಿದ್ದರೂ ಹೆಚ್ಚು ಹೆಚ್ಚು ಹಣ ತಂದು ತೊಂದರೆಗೆ ಒಳಗಾಗಬಾರದು. ಪೊಲೀಸರು ಹಾಗೂ ಚುನಾವಣಾಧಿಕಾರಿಗಳೊಂದಿಗೆ ತನಿಖೆಗೆ ಸಹಕರಿಸುವಂತೆ ಬಣಕಲ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಬಿ.ಸಿ.ಕೌಶಿಕ್ ತಿಳಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.