ಅನುಮತಿ ಪಡೆಯದೆ ಬಂದ್ ಗೆ ಕರೆ, ಪ್ರಚೋದನಕಾರಿ ಭಾಷಣ : 9 ಮಂದಿ ವಿರುದ್ದ ಕೇಸ್

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮಂಗಳೂರಿನ ಸುಹಾಸ್ ಶೆಟ್ಟಿ ಹತ್ಯೆ ಹಾಗೂ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಹಿಂದೂಗಳ ಹತ್ಯೆ ಖಂಡಿಸಿ ಶೃಂಗೇರಿಯಲ್ಲಿ ನಡೆದ ಬಂದ್‌ ಗೆ ಸಂಬಂಧಪಟ್ಟಂತೆ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸರ್ಕಾರದಿಂದ ಮಹತ್ವದ ಆದೇಶ!


ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಶೃಂಗೇರಿ ಬಂದ್ ಹಾಗೂ ಪ್ರತಿಭಟನೆಗೆ ಕರೆ ನೀಡುವ ಪೂರ್ವದಲ್ಲಿ ಅನುಮತಿ ಪಡೆದಿಲ್ಲ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಮುಖಂಡರಾದ ದಿವೀರ್ ಮಲ್ನಾಡ್, ಸಂತೋಷ್, ಎಚ್.ಎಸ್ ವೇಣುಗೋಪಾಲ್, ವಿ.ಎಸ್ ಹರೀಶ್ ಶೆಟ್ಟಿ, ಸುನಿಲ್ ಜೋಗಿಬೈಲ್, ಎಚ್‌.ಎಸ್ ಸುಬ್ರಹ್ಮಣ್ಯ, ಸುನಿಲ್ ಸಂಪೆಕೋಳಲು, ರಮೇಶ್ ಕೆ.ಎಸ್, ಪುನೀತ್ ಸೇರಿದಂತೆ ಒಟ್ಟು ಒಂಬತ್ತು ಜನರ ಮೇಲೆ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಇದನ್ನೂ ಓದಿ: ಶೃಂಗೇರಿಯ ಟ್ರಿಲಿಯಂಟ್ ಡಿಜಿಟಲ್ ಕಂಪನಿಯಲ್ಲಿ ಭರ್ಜರಿ ಜಾಬ್ ಆಫರ್!; ವಾಕ್-ಇನ್ ಸಂದರ್ಶನ, ಕಂಪ್ಲೀಟ್‌ ಡಿಟೈಲ್ಸ್‌ ಇಲ್ಲಿದೆ


ಬಂದ್ ವೇಳೆ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ, ಪಾದಚಾರಿಗಳು ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಮತ್ತು ಪ್ರಚೋದನಾಕಾರಿ ಭಾಷಣ ಮಾಡಿ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದ್ದಾರೆ ಈ ಕಾರಣಕ್ಕೆ ಪ್ರಕರಣ ದಾಖಲಾಗಿದೆ ಎಂದು ಶೃಂಗೇರಿ ಠಾಣೆ ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ಪಾಕ್ ವಿರುದ್ಧ ಆಪರೇಷನ್ ಸಿಂಧೂರ್..; ಭಾರತೀಯ ಸೇನೆಯಿಂದ ಏರ್ಸ್ಟ್ರೈಕ್..!


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.