ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬಳಸುವ ವಿಚಾರಕ್ಕೆ ಚಿಕ್ಕಮಗಳೂರು ನಗರದ ಅಕ್ಸಾ ಮಸೀದಿ ಬಳಿ ನಡೆದಿದ್ದ ಹಲ್ಲೆ ಸಂಬಂಧ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಚಿಕ್ಕಮಗಳೂರು ನಗರ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ; ಬಿಗ್ ಬಾಸ್ ಶೋಗೆ ಗುಡ್ ಬೈ ಹೇಳಿದ ಕಿಚ್ಚ ಸುದೀಪ್!; ಈ ದಿಢೀರ್ ನಿರ್ಧಾರಕ್ಕೆ ಕಾರಣ ಏನು?

ಏನಿದು ಘಟನೆ?;
ಕಳೆದ ತಿಂಗಳು 11.09.2024 ರಂದು ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಬಳುವ ವಿಚಾರವಾಗಿ ಮೀಟಿಂಗ್ ನಡೆಸಲಾಗಿತ್ತು. ಮೀಟಿಂಗ್ ವೇಳೆ ಒಂದು ಗುಂಪು ಡಿಜೆ ಬಳಸುವುದು ಬೇಡ ಎಂದಿದ್ದಾರೆ. ಈ ಸಂಬಂಧ ಗಲಾಟೆ ಶುರುವಾಗಿ ಗಲಾಟೆಯಲ್ಲಿ ಜಮೀಲ್ ಖಾನ್ ಎಂಬುವವರು ಗಂಭೀರ ಗಾಯಗೊಂಡಿದ್ದರು. ಜಮೀಲ್ ಖಾನ್ ಮೇಲೆ ಹಲ್ಲೆ ಮಾಡಿದ್ದ ರಾಹಿಲ್, ವಾರೀಸ್, ಮುಬಾರಕ್, ಕೈಫ್ ವಿರುದ್ಧ ಕೇಸ್ ದಾಖಲಾಗಿತ್ತು. ಹಲ್ಲೆ ಮಾಡಿದ್ದ ನಾಲ್ವರ ಆರೋಪಿಗಳ ಬಂಧನಕ್ಕೆ ಪಟ್ಟು ಹಿಡಿದು ಇಂದು ನಗರ ಪೊಲೀಸ್ ಠಾಣೆಯ ಮುಂದೆ ಮಳೆಯಲ್ಲೇ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.
ತಿಂಗಳು ಕಳೆದರೂ ಆರೋಪಿಗಳ ಬಂಧನ ಮಾಡದ ಪೊಲೀಸರು:
ಈ ಹಲ್ಲೆ ನಡೆದು ತಿಂಗಳು ಕಳೆದರೂ ಕೂಡ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ. ಪೊಲೀಸರ ಈ ಕ್ರಮ ಖಂಡಿಸಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ; ಗೃಹಲಕ್ಷ್ಮಿ ಯೋಜನೆಯ 1 ತಿಂಗಳ ಹಣ ಜಮೆ; ಇನ್ನೊಂದು ತಿಂಗಳ ಹಣದ ಕುರಿತು ಸ್ಪಷ್ಟನೆ ನೀಡಿದ ಸಚಿವೆ












