ಚಿಕ್ಕಮಗಳೂರು: ಬಜರಂಗದಳ ಕಾರ್ಯಕರ್ತರಿಂದ ಪೊಲೀಸರ ಮೇಲೆ ಹಲ್ಲೆಗೆ ಯತ್ನ | 7 ಕಾರ್ಯಕರ್ತರ ವಿರುದ್ಧ FIR ದಾಖಲು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಶೋಭಾಯಾತ್ರೆ ವೇಳೆ ಬಜರಂಗದಳದ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದಲ್ಲಿ ನಡೆದಿದೆ.

 

ಇದನ್ನೂ ಓದಿ; ರಾಜ್ಯದ ಅನ್ನದಾತರಿಗೆ ಸಿಹಿ ಸುದ್ದಿ ನೀಡಿದ ಸಿ.ಎಂ; 106 ತಾಲೂಕುಗಳಲ್ಲಿ ಕೃಷಿಭಾಗ್ಯ ಯೋಜನೆಗೆ ಮರುಚಾಲನೆ

ಆಲ್ದೂರು ಪಟ್ಟಣದಲ್ಲಿ ಶೋಭಾ ಯಾತ್ರೆ ವೇಳೆ ಮಸೀದಿ ಮುಂದೆಯೇ ಪಟಾಕಿ ಹಚ್ಚಿದ ಕಾರ್ಯಕರ್ತರನ್ನು ತಡೆಯಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಮಸೀದಿ ಮುಂದೆ ಪಟಾಕಿ ಸಿಡಿಸದಂತೆ ಪೊಲೀಸರ ಸೂಚನೆ ಇದ್ದರೂ, ವಿರೋಧದ ನಡುವೆಯೂ ಪಟಾಕಿ ಸಿಡಿಸಿದ್ದಾರೆ. ಇದನ್ನು ತಡೆಯಲು ಹೋದ ಪೊಲೀಸರಿಗೆ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ; ರೈತರೇ ಗಮನಿಸಿ; ಮೊಬೈಲ್ ಆ್ಯಪ್ ಮೂಲಕ ಬೆಳೆ ಮಾಹಿತಿ ಅಪ್ಲೋಡ್ ಮಾಡಲು ಸೂಚನೆ; ಹೇಗೆ ಅಪ್ ಲೋಡ್ ಮಾಡುವುದು, ಯಾವ ಆ್ಯಪ್ ಮೂಲಕ ಮಾಡುವುದು?

ಏಕಾಏಕಿ ಪಟಾಕಿ ಹಚ್ಚಿದ್ದರಿಂದ ಕೆಲ ಪೊಲೀಸರಿಗೆ ಗಾಯವಾಗಿದೆ. ಹೀಗಾಗಿ ಹಲ್ಲೆಗೆ ಯತ್ನ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ತುಡುಕೂರು ಮಂಜು, ಸುನಿಲ್ ಸೇರಿದಂತೆ 7 ಜನರ ಮೇಲೆ FIR ದಾಖಲಿಸಲಾಗಿದೆ.

 

ಇದನ್ನೂ ಓದಿ; ಬಿಜೆಪಿ ರಾಜ್ಯ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ; ಮಲೆನಾಡಿನ ಚಿಕ್ಕಮಗಳೂರು, ಕೊಡಗು ಜಿಲ್ಲೆಯವರಿಗಿಲ್ಲ ಸ್ಥಾನಮಾನ

ಇನ್ನು ಈ ಶೋಭಾಯಾತ್ರೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಮಾಜಿ ಶಾಸಕ ಸಿ.ಟಿ ರವಿ ಅವರು ಭಾಗಿಯಾಗಿದ್ದರು.

 

ಚಿಕ್ಕಮಗಳೂರು: ದತ್ತಜಯಂತಿ ಆರಂಭದಲ್ಲೇ ಪೊಲೀಸರು ಹಾಗೂ ದತ್ತಭಕ್ತರ ನಡುವೆ ಕಾದಾಟ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ದತ್ತಪೀಠದಲ್ಲಿ ನಡೆಯಲಿರುವ ದತ್ತಜಯಂತಿಗೆ ಕಾನೂನು ಸುವ್ಯಸ್ಥೆ ಕಾಪಾಡಿಕೊಂಡು ಶಾಂತಿಯುತ ಕಾರ್ಯಕ್ರಮ ನಡೆಸಲು ಜಿಲ್ಲಾ ಪೊಲೀಸ್ ಇಲಾಖೆ 4000 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ. ಆದರೆ ಇದೀಗ ಸಾವಿರಾರು ಜನ ಪೊಲೀಸರನ್ನ ನಿಯೋಜಿಸಿರುವುದೇ ಕಾದಾಟಕ್ಕೆ ಕಾರಣವಾಗಿದೆ.

ಇದನ್ನೂ ಓದಿ; ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಗೆ ಹೊಸ ರೂಪ; 5 ಲಕ್ಷ ರೂಪಾಯಿಯ ಹೆಲ್ತ್ ಕಾರ್ಡ್ ಬೇಕು ಅಂದ್ರೆ ಏನ್ ಮಾಡ್ಬೇಕು?;ಹೆಲ್ತ್ ಕಾರ್ಡ್ ಈ ದಾಖಲೆಗಳು ಕಡ್ಡಾಯ

ಹೌದು, ಇಂದು ನಗರದಲ್ಲಿ ಸಂಕೀರ್ತನಾ ಯಾತ್ರೆ ನಂತರ ಅನುಸೂಯ ದೇವಿ ಪೂಜೆಗೆಂದು ದತ್ತಪೀಠಕ್ಕೆ ತೆರಳುವ ವೇಳೆ ಪೊಲೀಸರು ಹಾಗೂ ವಿಶ್ವ ಹಿಂದು ಪರಿಷತ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ. ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ ಅವರ ವಾಹನವನ್ನು ಹತ್ತಾರು ಕಡೆ ತಡೆದು ತಪಾಸಣೆ ನಡೆಸಲಾಯಿತು. ಕೊನೆಯಲ್ಲಿ ದತ್ತಪೀಠ ಮುಖ್ಯ ದ್ವಾರದಲ್ಲೂ ತಡೆದು ನಿಲ್ಲಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಎಷ್ಟು ಬಾರಿ ತಡೆಯುತ್ತಿರಾ ಎಂದು ಕೆಳಗಿಳಿದು ತಾವೇ ಬ್ಯಾರಿಕೇಡ್ ಎಳೆದು ಇಲ್ಲೇ ಕುಳಿತುಕೊಳ್ಳುತ್ತೇವೆ ಬಿಡಿ ಎಂದಾಗ ಪೊಲೀಸರು ದತ್ತಭಕ್ತರ ನಡುವೆ ಮಾತಿನ ಚಕಮಕಿ ವಾಗ್ವಾದವೇ ನಡೆಯಿತು. ಈ ವೇಳೆ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಸಹಾ ವಿ.ಎಚ್.ಪಿ ಭಜರಂಗದಳ ಕಾರ್ಯಕರ್ತರು ಮುಂದಾದರು.

ಇದನ್ನೂ ಓದಿ; ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್‌ ನಲ್ಲಿ ಉದ್ಯೋಗಾವಕಾಶ; 1603 ತರಬೇತುದಾರರ ನೇಮಕ; ಐಟಿಐ, ಡಿಪ್ಲೊಮ, ಪದವಿ ಪಾಸಾದವರಿಗೆ ಅಪ್ರೆಂಟಿಸ್‌ ಹುದ್ದೆ

ಪಿಎಸ್ಐ ಅಮಾನತ್ತಿಗೆ ಒತ್ತಾಯ:
ಮುಖ್ಯದ್ವಾರದಲ್ಲಿ ವಾಹನ ತಡೆದ ಪಿಎಸ್ ಐ ಮುರಳಿಧರ್ ಅಮಾನತ್ತಿಗೆ ಒತ್ತಾಯಿಸಿ ಎಸ್ಪಿಗೆ ದೂರು ನೀಡಿತ್ತೇವೆ ಎಂದ ವಿಎಚ್.ಪಿ ಮುಖಂಡರು ಹೇಳಿದರು. ಸಾವಿರಾರು ಜನ ಪೊಲೀಸರ ನಿಯೋಜಿಸಿ ವ್ಯಾಪಕ ಬಂದೋಬಸ್ತ್ ಮಾಡಿರುವುದಕ್ಕೆ ದತ್ತಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.