ಹಳದಿ ಎಲೆಚುಕ್ಕಿ ರೋಗ ಸೇರಿದಂತೆ ಅಡಿಕೆ ಬೆಳೆಯ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಉದ್ದೇಶದಿಂದ ಕಳೆದ ಆರು ವರ್ಷಗಳಿಂದ ನಡೆಸಿದ ಸಂಶೋಧನೆಯ ಫಲವಾಗಿ “ಬಯೋಶಮನ” ಔಷಧಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಇನಾಮಿಕ್ ಟೆಕ್ನಾಲಜಿಯ ಸಿಇಒ ಬಾಲಸುಬ್ರಹ್ಮಣ್ಯ ಎಚ್.ಎಂ. ತಿಳಿಸಿದ್ದಾರೆ.
ಜೈವಿಕ ತಂತ್ರಜ್ಞಾನ ಪರಿಣಿತರ ಸಹಕಾರದಲ್ಲಿ ರೂಪುಗೊಂಡ ಈ ಉತ್ಪನ್ನವನ್ನು ಮೊದಲು ತಮ್ಮ ತೋಟದಲ್ಲಿ ಹಾಗೂ ನಂತರ ಹಲವು ರೈತರ ತೋಟಗಳಲ್ಲಿ ಪರೀಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸಿಂಪಡಿಸಿದ ಬಳಿಕ ಗಿಡಗಳ ಬೆಳವಣಿಗೆ ಸುಧಾರಿಸಿದ್ದು, ರೋಗದ ಹರಡುವಿಕೆ ಕಡಿಮೆಯಾಗಿದೆ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಅವರು ತಿಳಿಸಿದ್ದಾರೆ.












