ಅಡಿಕೆ ಬೆಳೆಗೆ ಮಾರಕವಾಗಿ ಪರಿಣಮಿಸಿರುವ ಹಳದಿ ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ಅಭಿವೃದ್ಧಿಪಡಿಸಲಾಗಿದೆ ಎನ್ನಲಾದ “ಬಯೋಶಮನ” ಔಷಧಿ ಕುರಿತು ರೈತರಲ್ಲಿ ಆಸಕ್ತಿ ಹೆಚ್ಚುತ್ತಿದೆ.
ಈ ಕುರಿತು ಮಾಹಿತಿ ನೀಡಿದ ಬಾಲಸುಬ್ರಹ್ಮಣ್ಯ ಎಚ್.ಎಂ., ಔಷಧಿಯನ್ನು ವಿವಿಧ ಪ್ರದೇಶಗಳ ರೈತರ ತೋಟಗಳಲ್ಲಿ ಪರೀಕ್ಷಿಸಲಾಗಿದ್ದು, ಸಿಂಪಡಿಸಿದ ಬಳಿಕ ಗಿಡಗಳಲ್ಲಿ ಹೊಸ ಚಿಗುರು ಮೂಡುವುದು ಹಾಗೂ ರೋಗದ ಹರಡುವಿಕೆ ಕಡಿಮೆಯಾಗಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಕೊಳೆರೋಗ ಹಾಗೂ ಶಿಲೀಂಧ್ರ ಸಂಬಂಧಿತ ಸಮಸ್ಯೆಗಳ ಮೇಲೆಯೂ ಉತ್ತಮ ಪರಿಣಾಮ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.












