ಕಡೂರು: (ನ್ಯೂಸ್ ಮಲ್ನಾಡ್ ವರದಿ) ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗ್ರಿಲ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಶನಿವಾರ ರಾತ್ರಿ ಕಡೂರು ತಾಲ್ಲೂಕು ಮಚೇರಿ ಬಳಿಯ ನಾಯಿಸಾಡ್ಲಿ ಎಂಬಲ್ಲಿ ನಡೆದಿದೆ.

ಕಡೂರು ಕೋಟೆ ಬಡಾವಣೆಯ ನಿವಾಸಿ ಉಮೇಶ್ (40) ಮೃತಪಟ್ಟವರು. ಕುಂತಿಹೊಳೆಯಿಂದ ಕಡೂರಿಗೆ ಬರುತ್ತಿದ್ದಾಗ ಈ ಘಟನೆ ನಡೆದಿದ್ದು, ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವ ಉಂಟಾದ ಕಾರಣ ಉಮೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇವರು ಬೀರೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇದನ್ನೂ ಓದಿ: ಭಾರತ್ ಪೆಟ್ರೋಲಿಯಂ ಲಿಮಿಟೆಡ್ ನಲ್ಲಿ ಜಾಬ್; SSLC, PUC ವಿದ್ಯಾರ್ಹತೆ
ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪಾನ್ ಕಾರ್ಡ್ ಹೊಂದಿರುವವರ ಗಮನಕ್ಕೆ; ಇಂತಹವರಿಗೆ 10 ಸಾವಿರ ದಂಡ!












