ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ನಗರದ ತಮಿಳು ಕಾಲೋನಿ ರಸ್ತೆ ಬದಿ ನಿಲ್ಲಿಸಿದ್ದ 8ಕ್ಕೂ ಹೆಚ್ಚು ಕಾರುಗಳ ಗಾಜುಗಳನ್ನು ಒಡೆದು ಕಾರಿನಲ್ಲಿದ್ದ ನಗದು ಕಳವು ಮಾಡಿರುವ ಘಟನೆ ನಡೆದಿದೆ.
ಬುಧವಾರ ರಾತ್ರಿ ತಮಿಳು ಕಾಲೋನಿಯ ಲಾರಿ ನಿಲ್ದಾಣದ ಸಮೀಪ ರಸ್ತೆಯಲ್ಲಿ ಕಾರುಗಳನ್ನು ನಿಲ್ಲಿಸಿ ಮಾಲೀಕರು ಮನೆಗೆ ತೆರಳಿದ್ದರು. ಬೆಳಗ್ಗೆ ಬಂದು ನೋಡಿದಾಗ ಟಾಟಾ ಏಸ್ ಸೇರಿ ಹಲವು ವಾಹನಗಳ ಮುಂಭಾಗದ ಗಾಜು ಒಡೆದಿರುವುದು ಬೆಳಕಿಗೆ ಬಂದಿದೆ.

ಕಾರುಗಳ ಗಾಜುಗಳನ್ನು ಒಡೆದ ಕಿಡಿಗೇಡಿಗಳು ಕಾರಿನ ಡ್ಯಾಶ್‌ಬೋರ್ಡ್ ಒಡೆದು ಅದರಲ್ಲಿದ್ದ ನಗದು ದೋಚಿದ್ದಾರೆ. ಟಾಟಾ ಏಸ್ ವಾಹನದಲ್ಲಿ 25 ಸಾವಿರ ರೂ. ವ್ಯಾಪಾರದ ಹಣ ಕಳ್ಳರ ಪಾಲಾಗಿದೆ.














