ಚಿಕ್ಕಮಗಳೂರು: ಜಾಮೀನು ಪಡೆದ ಕಡೂರು ಹಿಂದಿನ ತಹಶೀಲ್ದಾರ್ ಉಮೇಶ್ | ಮತ್ತೆ ಅರಣ್ಯ ಅಧಿಕಾರಿಗಳ ವಶಕ್ಕೆ

ಚಿಕ್ಕಮಗಳೂರು:  (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡಿನಲ್ಲಿ ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ಕಡೂರು ತಾಲೂಕಿನ ಹಿಂದಿನ ತಹಶೀಲ್ದಾರ್ ಆಗಿದ್ದ ಉಮೇಶ್ ಬಂಧನವಾಗಿದ್ದ ಪ್ರಕರಣ ಸಂಬಂಧಿಸಿದಂತೆ ಜೆ.ಎಮ್.ಎಫ್ ನ್ಯಾಯಾಲಯದಿಂದ ಉಮೇಶ್ ಗೆ ಷರತ್ತುಬದ್ಧ ಜಾಮೀನು ನೀಡಲಾಗಿತ್ತು. ಜೈಲಿನಿಂದ ಹೊರ ಬರುತ್ತಿದ್ದಂತೆ ಮತ್ತೊಂದು ಪ್ರಕರಣದಲ್ಲಿ ಉಮೆಶ್ ನನ್ನು ಬಂಧಿಸಲಾಗಿದೆ.

 

ಇದನ್ನೂ ಓದಿ; ಚಂದ್ರನ ಅಂಗಳಕ್ಕಿಳಿದ ರೋವರ್ ಪ್ರಜ್ಞಾನ್; ರೋವರ್ ಚಲನೆಯ ಮತ್ತೊಂದು ವಿಡಿಯೊವನ್ನು ಹಂಚಿಕೊಂಡ ಇಸ್ರೋ

ಹೌದು, ಜಾಮೀನು ಪಡೆದು ನಿನ್ನೆ (ಶುಕ್ರವಾರ) ಚಿಕ್ಕಮಗಳೂರು ಜೈಲಿನಿಂದ ಹೊರ ಬರುತ್ತಿದ್ದಂತೆ ಚಿಕ್ಕಮಗಳೂರು ಅರಣ್ಯ ಇಲಾಖೆಯ ಡಿ,ಎಫ್.ಒ ರಮೇಶ್ ಬಾಬಾ ನೇತೃತ್ವದ ತಂಡ ಎಮ್ಮೆದೊಡ್ಡಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೀಸಲಿಟ್ಟ ಪ್ರಕರಣ ಸಂಬಂಧ ಉಮೇಶನನ್ನು ಬಂಧಿಸಿದೆ.

 

ಇದನ್ನೂ ಓದಿ; ಅರ್ನಬ್ ಗೋಸ್ವಾಮಿ ಪಾಲಾದ ಕನ್ನಡ ಖ್ಯಾತ ಸುದ್ದಿವಾಹಿನಿ; ದಿಗ್ವಿಜಯ ನ್ಯೂಸ್ ಇನ್ಮುಂದೆ ರಿಪಬ್ಲಿಕ್ ಕನ್ನಡ.. ಏನಿದು ಸುದ್ದಿ?

ಈ ಹಿಂದೆ ಕಡೂರು ತಾಲೂಕಿನ ತಹಶಿಲ್ದಾರ್ ಆಗಿದ್ದ ಅವಧಿಯಲ್ಲಿ ಉಮೇಶ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೀಸಲಿಟ್ಟ ಪ್ರದೇಶದಲ್ಲಿ ಅಕ್ರಮ ಮಾಡಿರುವುದು ಬೆಳಕಿಗೆ ಬಂದಿದ್ದು. 220 ಪ್ರಭಾವಿಗಳಿಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡದೆ ಪರಭಾರೆ ಮಾಡಿರುವುದು 15 ಜನ ತಹಶಿಲ್ದಾರ್ ತಂಡದ ತನಿಖೆಯಿಂದ ಹೊರ ಬಂದಿದ್ದು. ಕಡೂರು ಅರಣ್ಯ ಇಲಾಖೆಯಲ್ಲಿ ಉಮೇಶ್ ವಿರುದ್ಧ 1963ರ ಅರಣ್ಯ ಕಾಯ್ದೆ ಅಡಿ ಉಮೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.

 

ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್: ಸಂಸದ ಸ್ಥಾನದಿಂದ ಅನರ್ಹ

ಹಾಸನ: (ನ್ಯೂಸ್ ಮಲ್ನಾಡ್ ವರದಿ) ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ (prajwal revanna disqualified:) ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.

ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಅಫಿಡವಿಟ್ ನಲ್ಲಿ ಘೋಷಿಸಿದ ಆಸ್ತಿ ವಿವರಗಳ ಕುರಿತು ಅಕ್ಷೇಪ ವ್ಯಕ್ತಪಡಿಸಿ ವಕೀಲ ದೇವರಾಜೇಗೌಡ, ಪ್ರಜ್ವಲ್ ರೇವಣ್ಣ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಹೈಕೋಟ್ ಗೆ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನವನ್ನು ಅನರ್ಹಗೊಳಿಸಿ (prajwal revanna disqualified:) ಆದೇಶಿಸಿದೆ.

 

ಇನ್ನು ಸಂಸದ ಸ್ಥಾನ ಆಯ್ಕೆ ಅಸಿಂಧುಗೊಳಿಸಿ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಪ್ರಜ್ವಲ್ ರೇವಣ್ಣ ಪರ ವಕೀಲರ ಸಿದ್ಧತೆ ನಡೆಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.