ಮಹಿಳಾ ಸಿಬ್ಬಂದಿಗಳಿಗೆ ಬಾಗಿನ ನೀಡಿ ಸಹೋದರಿ ಸ್ಥಾನ ನೀಡಿದ ಬಾಳೆಹೊನ್ನೂರು ಪಿಎಸ್ಐ ರವೀಶ್

ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಪೊಲೀಸ್ ಠಾಣೆಯ ಮಹಿಳಾ ಪೇದೆಗಳಿಗೆ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಬಾಗಿನ ನೀಡಿ ಗೌರವಿಸಿದ್ದಾರೆ.


ಇದನ್ನೂ ಓದಿ; ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ಸ್ಕಾಲರ್ ಶಿಪ್; ಈ ಅರ್ಹತೆ ಹೊಂದಿದ್ದರೆ ಅರ್ಜಿ ಸಲ್ಲಿಸಿ


ಬಾಳೆಹೊನ್ನೂರು ಠಾಣೆಯ ಪಿಎಸ್ ಐ ರವೀಶ್ ತಮ್ಮ ಠಾಣೆಯ ನಾಲ್ವರು ಮಹಿಳಾ ಪೇದೆಗಳಿಗೆ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಠಾಣೆಯಲ್ಲಿ ಬಾಗಿನ ನೀಡಿ ಗೌರವಿಸಿದ್ದಾರೆ. ಗೌರಿ-ಗಣೇಶ ಹಬ್ಬಕ್ಕೆ ಸಹೋದರರು ಸಹೋದರಿಯರಿಗೆ ಬಾಗಿನ ನೀಡುವುದು ಹಿಂದೂಗಳ ಸಂಪ್ರದಾಯ. ಹೀಗಾಗಿ ವರ್ಷ ಪೂರ್ತಿ ನಮ್ಮ ಜೊತೆ ಕೆಲಸ ಮಾಡುವ ಮಹಿಳಾ ಪೇದೆಗಳು ನಮ್ಮ ಸಹೋದರಿಯರು ಎಂದು ಅರಿಶಿನ-ಕುಂಕುಮ, ಹಣ್ಣು-ಕಾಯಿ, ಬಳೆ, ಸೀರೆ ಹಾಗೂ ಸ್ವೀಟ್ಸ್ ನೀಡಿ ಗೌರವಿಸಿದ್ದಾರೆ.


ಇದನ್ನೂ ಓದಿ; 10th, 12th ಪಾಸ್ ಆದವರಿಗೆ ಸಿಗಲಿದೆ 60,000 ಸ್ಕಾಲರ್ ಶಿಪ್; ಈ ಷರತ್ತು ಕಡ್ಡಾಯ


ಬಾಳೆಹೊನ್ನೂರು PSI ರವೀಶ್ ಕಾರ್ಯಕ್ಕೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋವನ್ನು ನೋಡಿ 👇 

ಪೊಲೀಸ್ ಠಾಣೆಗೆ ಹೈಟೆಕ್ ಟಚ್ ಕೊಟ್ಟ ಠಾಣಾಧಿಕಾರಿ PSI ರವೀಶ್

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.