ಕಾಡಾನೆ ದಾಳಿಗೆ ರೈತರೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಿಂದ ಬಾಳೆಹೊನ್ನೂರು ಭಾಗದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭವಾಗಿತ್ತು. ಇದೀಗ ಒಂದು ಪುಂಡಾನೆಯನ್ನು ಸೆರೆ ಹಿಡಿಯಲಾಗಿದೆ.
ಇದನ್ನೂ ಓದಿ: 60% ಅಂಕ ಪಡೆದ ವಿದ್ಯಾರ್ಥಿಗಳಿಗೆ 50,000 ಸ್ಕಾಲರ್ ಶಿಪ್

ಬನ್ನೂರು ಗ್ರಾಮದಲ್ಲಿ ಕಳೆದ ಬುಧವಾರ ರಾತ್ರಿಯಷ್ಟೇ ಕಾಡಾನೆಯೊಂದು ಅನಿತಾ ಎಂಬ ಕೂಲಿ ಕಾರ್ಮಿಕ ಮಹಿಳೆಯನ್ನು ಸಾಯಿಸಿತ್ತು. ಮಹಿಳೆ ಮೃತಪಟ್ಟ ಬಳಿಕ ಬಾಳೆಹೊನ್ನೂರು ಅರಣ್ಯ ಇಲಾಖೆ ಮುಂಭಾಗದಲ್ಲಿ ಸಾವಿರಾರು ರೈತರು, ಸಾರ್ವಜನಿಕರು ಬೃಹತ್ ಪ್ರತಿ ಭಟನೆ ನಡೆಸಿ ಕಾಡಾನೆಯನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಐದು ದಿನಗಳ ಅಂತರದಲ್ಲಿ ಕಾಡಾನೆ ತುಳಿತಕ್ಕೆ ಮತ್ತೋರ್ವ ಸುಬ್ಬೇಗೌಡ ಎನ್ನುವವರು ಬಲಿಯಾಗಿದ್ರು.
ಇದನ್ನೂ ಓದಿ: ರಾಜ್ಯದ ರೈತರಿಗೆ ಎಚ್ಚರಿಕೆ; ಪಿಎಂ ಕಿಸಾನ್ ಹಣ 110 ಕೋಟಿ ವಂಚನೆ!
ಹೀಗಾಗಿ ನಿನ್ನೆ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇದಾದ ಬಳಿಕ ಅಲರ್ಟ್ ಆದ ಸರ್ಕಾರ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಬಿಡಾರದಿಂದ ಕುಮ್ಕಿಯ ನಾಲ್ಕು ಆನೆಗಳು ಕಾಡಾನೆ ಸೆರೆಗೆ ಮುಂದಾಗಿದ್ದವು. ನಿನ್ನೆ ಮಧ್ಯಾಹ್ನದಿಂದಲೇ ಆನೆ ಕಾರ್ಯಾಚರಣೆ ಆರಂಭವಾಗಿತ್ತು. ಒಂದು ಪುಂಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿದ ಬಳಿಕ ತಪ್ಪಿಸಿಕೊಂಡು ಎರಡೇ ಬಾರಿ ಅರಿವಳಿಕೆ ಚುಚ್ಚುಮದ್ದಿಗೆ ಆನೆ ಬಿದ್ದಿದ್ದು, ಅಲ್ಲಿಂದ ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.












