ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ)ತಾಲೂಕಿನ ಕೆರೆಕಟ್ಟೆ ಸಮೀಪ ಕಾಡಾನೆ ಸೆರೆ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಎರಡು ದಿನ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಬಸ್ ಗಳ ಸುರಕ್ಷತೆಗೆ ಮಹತ್ವದ ಕ್ರಮ; ಈ ನಿಯಮಗಳ ಪಾಲನೆ ಕಡ್ಡಾಯ!

ಕಳೆದ ಶುಕ್ರವಾರ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮದಲ್ಲಿ ಇಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದರು. ಈ ಸಂಬಂಧ ಕಾಡಾನೆಯನ್ನು ಸೆರೆ ಹಿಡಿಯಲು ದುಬಾರೆ ಕ್ಯಾಂಪ್ ನಿಂದ 4 ಆನೆಗಳು ಬಂದಿದ್ದು, ಇಂದಿನಿಂದ ಕಾಡಾನೆ ಸೆರೆ ಕಾರ್ಯಾಚರಣೆ ನಡೆಯಲಿದೆ. ಸೆರೆ ಕಾರ್ಯಾಚರಣೆ ಸಂದರ್ಭದಲ್ಲಿ ಯಾವುದೇ ಜನಸಂದಣಿಯಾಗದಂತೆ ಹಾಗೂ ಗುಂಪು ಘರ್ಷಣೆಯಾಗದಂತೆ ಕಾಪಾಡುವ ಸಲುವಾಗಿ 02/11/2025 ರಿಂದ 03/11/2025 ರ ವರೆಗೆ ಎರಡು ದಿನ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಶೃಂಗೇರಿ ತಹಶೀಲ್ದಾರ್ ಅನೂಪ್ ಸಂಜೋಗ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಪೊಲೀಸ್ ಸಿಬ್ಬಂದಿಗಳ ಸ್ಲೋಚ್ ಕ್ಯಾಪ್ ಗೆ ಗುಡ್ ಬೈ; ಪೊಲೀಸ್ ಪೇದೆಗಳಿಗೆ ಹೊಸ ಟೋಪಿ












