ಶೃಂಗೇರಿ ಕ್ಷೇತ್ರದ ಚುನಾವಣಾ ತಕರಾರರು ಅರ್ಜಿ ಸಂಬಂಧ ಮಾಜಿ ಶಾಸಕ ಜೀವರಾಜ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಂತೆ ಶಾಸಕ ಟಿ. ಡಿ ರಾಜೇಗೌಡ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿದೆ. ಈ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಮುಂದುವರಿಸಲಿದ್ದು, ಅರ್ಜಿದಾರರು ಅಲ್ಲಿ ಆಕ್ಷೇಪಣೆ ಸಲ್ಲಿಸಲು ಅರ್ಹರು ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ; ಕಸ್ತೂರಿ ರಂಗನ್ ವರದಿ ತಿರಸ್ಕಾರ; ಸಚಿವ ಸಂಪುಟ ಸಭೆ ನಿರ್ಧಾರ

ಈ ಸಂಬಂಧ ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ಪೀಠವು. ಜೀವರಾಜ್ ಸಲ್ಲಿಸಿರುವ ದಾಖಲೆಗಳ ಸ್ವೀಕಾರಾರ್ಹತೆ/ಪ್ರಸ್ತುತತೆಯ ಬಗ್ಗೆ ಅರ್ಜಿದಾರರು ಸೂಕ್ತ ಹಂತದಲ್ಲಿ ಅಹವಾಲುಗಳನ್ನು ಸಲ್ಲಿಸಲು ಅರ್ಹರು. ಇದನ್ನು ಕಾನೂನಿನ ಪ್ರಕಾರ ಹೈಕೋರ್ಟ್ ಪರಿಗಣಿಸಲಿದೆ ಎಂದು ಸ್ಪಷ್ಟನೆ ನೀಡಿ ಅರ್ಜಿಯ ವಿಲೇವಾರಿ ಮಾಡಿತು.
ಇದನ್ನೂ ಓದಿ; ಅಕ್ಟೋಬರ್ 7 ರಿಂದ ರಾಜ್ಯವ್ಯಾಪ್ತಿ ಇ-ಸ್ವತ್ತು ಕಡ್ಡಾಯ; ತಪ್ಪಿದರೆ ಕಾನೂನು ಕ್ರಮ, ಇದರ ಉದ್ದೇಶವೇನು?
ಶೃಂಗೇರಿ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಟಿ. ಡಿ ರಾಜೇಗೌಡ ಅಕ್ರಮವಾಗಿ ಗೆಲುವು ಸಾಧಿಸಿದ್ದಾರೆ. ಕೇವಲ 200 ಮತಗಳ ಅಂತರದಲ್ಲಿ ಗೆದ್ದಿದ್ದು, ಅಂಚೆ ಮತಗಳ ಎಣಿಕೆಯಲ್ಲಿ ಅಧಿಕಾರಿಗಳು ಲೋಪ ಎಸಗಿದ್ದಾರೆ. ಎದುರಾಳಿಯು ಚುನಾವಣೆಗೆ 20 ಕೋಟಿ ಖರ್ಚು ಮಾಡಿದ್ದಾರೆ. ಇದಕ್ಕೆ ಪ್ರಬಲವಾದ ಸಾಂದರ್ಭಿಕ ಪುರಾವೆಗಳು ಇವೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಈ ಅರ್ಜಿ ವಜಾಗೊಳಿಸಬೇಕೆಂದು ರಾಜೇಗೌಡ ಅವರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ವಜಾಗೊಳಿಸಲು ಹೈಕೋರ್ಟ್ ಜುಲೈ 5ರಂದು ನಿರಾಕರಿಸಿತ್ತು. ಇದೀಗ ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ಪೀಠವು ಈ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಮುಂದುವರಿಸಲಿದ್ದು, ಅರ್ಜಿದಾರರು ಅಲ್ಲಿ ಆಕ್ಷೇಪಣೆ ಸಲ್ಲಿಸಲು ಅರ್ಹರು ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ; ಮೊದಲ ಬಾರಿಗೆ ಸ್ಪ್ಯಾಮ್ ಪತ್ತೆಗೆ AI ಚಾಲಿತ ನೆಟ್ವರ್ಕ್ ಪ್ರಾರಂಭ; ಯಾವುದೇ ಸ್ಪ್ಯಾಮ್ ಕರೆ ಬಂದರೆ ಸುಲಭವಾಗಿ ತಿಳಿಯುತ್ತೆ












