ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಹಿಂದೂ ಸಮಾಜೋತ್ಸವ ಶೃಂಗೇರಿ ತಾಲೂಕು ಅಡ್ಡಗದ್ದೆ ಮಂಡಲದ ವತಿಯಿಂದ ಭಾನುವಾರ (ಇಂದು) 25-01-2026 ರಂದು ಮಧ್ಯಾಹ್ನ 2:30ರಿಂದ ಕಾವಡಿ ಗ್ರಾಮದ ಶ್ರೀ ಗೋಪಾಲ ಹಾಗೂ ಶ್ರೀಮತಿ ಭಾರತಿ ಅವರ ಕೃಷಿ ಕ್ಷೇತ್ರದಲ್ಲಿ ಭವ್ಯ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಹರಿಹರಪುರದ ಪರಮಪೂಜ್ಯ ಶ್ರೀ ಶ್ರೀ ಮದ್ದಗದ್ಗುರು ಶಂಕರಾಚಾರ್ಯರು ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳು ದಿವ್ಯ ಉಪಸ್ಥಿತಿ ನೀಡಿ ಆಶೀರ್ವಚನ ನೀಡಲಿದ್ದಾರೆ.
ಹಾಸನದ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಮಹಿಪಾಲ್ ಅವರು ದಿಕ್ಕೂಚಿ ಭಾಷಣ ನೀಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪ್ರದೀಪ್ ಚೋಳರಮನೆ ವಹಿಸಲಿದ್ದಾರೆ. ಉಪಾಧ್ಯಕ್ಷರಾಗಿ ಶ್ರೀ ಶ್ರೀಕಾಂತ್ ಕೆ. ಹಾಗೂ ಶ್ರೀ ನಾಗೇಶ್ ಕಾಮತ್, ಕಾರ್ಯಕ್ರಮದ ಸಂಯೋಜಕರಾಗಿ ಶ್ರೀ ದಿವೀರ್ ಮಲ್ನಾಡ್, ಸಹ ಸಂಯೋಜಕರಾಗಿ ಶ್ರೀ ನಂದಕುಮಾರ್ ಮತ್ತು ಶ್ರೀಮತಿ ಸುಮಂಗಲಿ ಆನಂದಸ್ವಾಮಿ, ಕೋಶಾಧ್ಯಕ್ಷರಾಗಿ ಕೊರಡಕಲ್ಲಿನ ಶ್ರೀ ಅನಿರುದ್ಧ ಹಾಗೂ ಆಯೋಜನಾ ಸಮಿತಿಯ ಸದಸ್ಯರಾಗಿ ಶ್ರೀ ಪರಾಶರ ಟಿ.ಕೆ., ಡಾ. ಅಣ್ಣಾದೊರೆ, ಸುಬ್ರಹ್ಮಣ್ಯ ಮರಾಠ, ವೆಂಕಪ್ಪ ಆಚಾರ್, ಕಾನಾರಂ ಪಟೇಲ್, ವೇಣುಮಾಧವ ನಾಯಕ್, ಕೆ.ಎಂ. ಗೋಪಾಲ್, ಸುಧೀಂದ್ರ ಬೆಟ್ಟಗದ್ದೆ, ರಂಗನಾಥ್ ಮಾವಿನಕಾಡು, ರಾಮಣ್ಣ ಭಂಡಾರಿ ಹಾಗೂ ಸ್ಥಳೀಯರಾಗಿ ರಾಘವೇಂದ್ರ ಹಂಚಲಿ ಇದ್ದಾರೆ.
ಈ ಹಿಂದೂ ಸಮಾಜೋತ್ಸವದ ಮೂಲಕ ಸಮಾಜದಲ್ಲಿ ಏಕತೆ, ಸಂಸ್ಕೃತಿ ಮತ್ತು ಧಾರ್ಮಿಕ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.












