
ಕೊಪ್ಪ:(ನ್ಯೂಸ್ ಮಲ್ನಾಡ್ ವರದಿ)ಕೊಪ್ಪ ಪೊಲೀಸ್ ಠಾಣೆಯ ಪಿಎಸ್‌ಐ ಆದ ಬಸವರಾಜ ಅವರು ವರ್ಗಾವಣೆಗೊಂಡು ಹೋಗುತ್ತಿರುವ ಸಂದರ್ಭದಲ್ಲಿಗೂಡ್ಸ್ ಆಟೋ ಚಾಲಕರ ಸಂಘದಿಂದ ಮತ್ತು ಆಟೋ ಚಾಲಕರ ಸಂಘದಿಂದ ತುಂಬು ಹೃದಯದಿಂದ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದ್ದಾರೆ.
ಅವರಿಗೆ ಗೌರವ ಸಮರ್ಪಣೆ ಮಾಡಿ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಶೃಂಗೇರಿ ಕ್ಷೇತ್ರದ ಗೌರವ ಅಧ್ಯಕ್ಷರಾದ ಹೆಚ್. ಆರ್. ಜಗದೀಶ್ ಮಾತನಾಡಿ ಕಂಬನಿಯಲ್ಲೂ ಸಂಭ್ರಮವಿರುತ್ತದೆ. ಅರಿಯಲು ವಿಶಾಲ ಮನೋಭಾವ ಇರಬೇಕು. ಸರಳತೆಯಲ್ಲೂ ಸಿರಿವಂತಿಕೆಯಿರುತ್ತದೆ ಗುರುತಿಸಲು ಹೃದಯವಂತಿಕೆಬೇಕು. ಮೌನದಲ್ಲೂ ಮಾತು ಇರುತ್ತದೆ, ಅರ್ಥ ಮಾಡಿಕೊಳ್ಳೋ ಎದೆಗಾರಿಕೆ ಬೇಕು.

ಇದನ್ನೂ ಓದಿ: ಡ್ರೋನ್ ಪೈಲಟ್ ಆಗಲು ಇಲ್ಲಿದೆ ಸುವರ್ಣಾವಕಾಶ: ಇಂದಿರಾ ಗಾಂಧಿ ವೃತ್ತಿ ಅಭಿವೃದ್ದಿ ಕೇಂದ್ರದ ವತಿಯಿಂದ ಉಚಿತ ಡ್ರೋನ್ ಪೈಲಟ್ ತರಬೇತಿಬಡವರು ಮತ್ತು ನಿರ್ಗತಿಕರನ್ನು ಕಂಡರೆ ಕಣ್ಣಿರಾಗುತ್ತಿದ್ದ ಅಪರೂಪದ ಹೃದಯವಂತ ಪೊಲೀಸ್ ಇವರು, ಸಮಾಜದ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದ ಸರಳ ಮನೋಭಾವ ಹೊಂದಿದ್ದ ಹಾಗೆಯೇ ಸಮಾಜ ಕಂಟಕರಿಗೆ ಸಿಂಹಸ್ವಪ್ನ ವಾಗಿದ್ದರು ಎಂದರು.

ನಮ್ಮ ಆಟೋಚಾಲಕರ ಅತ್ಯಂತ ಮೆಚ್ಚಿನ ಅಧಿಕಾರಿಯಾಗಿದ್ದ ಇವರು ತಪ್ಪು ಮಾಡಿದಾಗ ಕರೆದು ಬುದ್ದಿಮಾತು ಹೇಳುತ್ತಿದ್ದರು ಚಾಲಕರ ಕಷ್ಟಗಳನ್ನು ಅರಿತು ಅವರೊಂದಿಗೆ ಸೌಜನ್ಯವಾಗಿ ವರ್ತಿಸುತ್ತಿದ್ದನ್ನು ಮರೆಯಲು ಸಾದ್ಯವಿಲ್ಲ ಎಂದು ಬಸವರಾಜ ಅವರ ಮೇಲಿರುವಂತ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.
ಆಟೋ ಚಾಲಕರ ಗೌರವ ಸ್ವೀಕರಿಸಿದ ಪಿಎಸ್ಐ ಬಸವರಾಜ್ ಮಾತನಾಡಿದ್ದು, “ವರ್ಗಾವಣೆ ನಮ್ಮಂತಹ ಅದಿಕಾರಿಗಳಿಗೆ ಹೊಸದಲ್ಲ ಆದರೆ ಕೊಪ್ಪದಲ್ಲಿ ಕೆಲಸ ಮಾಡಿದ್ದು ನನಗೆ ಅತ್ಯಂತ ಹಿತವಾದ ಅನುಭವ ನೀಡಿದೆ ಅಲ್ಲದೆ ಇಲ್ಲಿನ ಆಟೋಚಾಲಕರು ನೀಡಿದ ಪ್ರೀತಿ ನನಗೆ ಎಂದೂ ಸಹ ನೆನಪಿನಲ್ಲಿರುತ್ತದೆ” ಎಂದಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ಈ ಬೀಳ್ಕೊಡುಗೆ ಸಂಧರ್ಭದಲ್ಲಿ ಕೊಪ್ಪ ಆಟೋ ಚಾಲಕರ ಸಂಘದ ಅಧ್ಯಕ್ಷ ಯು ಪಿ ವಿಜಯ್ ಕುಮಾರ್, ಗೂಡ್ಸ್ ಆಟೋ ಚಾಲಕರ ಸಂಘದ ಅಧ್ಯಕ್ಷ ನಾಗೇಶ್, ಸುರೇಂದ್ರ ಶೆಟ್ಟಿ, ವಿಕ್ರಂ, ರಾಘವೇಂದ್ರ ಕೇಸವೇ, ಅನಿಲ್, ಮತ್ತು ಆಟೋ ಚಾಲಕರು ಮತ್ತು ಮಾಲೀಕರು ಮುಂತಾದವರು ಉಪಸ್ಥಿತರಿದ್ದರು.













