ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತುಂಗಾ ನದಿಯಲ್ಲಿ ಈಜಲು ಹೋಗಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ. ಆಕಾಶ್ (15) ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ವಿದ್ಯಾರ್ಥಿ.
ಇದನ್ನೂ ಓದಿ: ಫಿಶ್ ಪ್ರಿಯರೇ ಎಚ್ಚರ…!; ಈ ಮೀನುಗಳನ್ನು ತಿಂದ್ರೆ ಆರೋಗ್ಯಕ್ಕಿದೆ ಕುತ್ತು!

ಪಟ್ಟಣದ ಜೇಸೀಸ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಖಾಸಗಿ ಬ್ಯಾಂಕ್ ಉದ್ಯೋಗಿಯೊಬ್ಬರ ಮಗ ಆಕಾಶ್, ಇಂದು ಶಾಲೆಗಳಿಗೆ ರಜೆ ಇದ್ದ ಕಾರಣ ನಾಲ್ವರು ಸ್ನೇಹಿತರೊಂದಿಗೆ ತುಂಗಾ ನದಿಯಲ್ಲಿ ಈಜಲು ತೆರಳಿದ್ದಾನೆ. ಆದರೆ, ನಾಲ್ವರ ಪೈಕಿ ವಿದ್ಯಾರ್ಥಿ ಆಕಾಶ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ವಾಟ್ಸ್ಆ್ಯಪ್ ಬಳಕೆದಾರರಿಗೆ ಒಳ್ಳೆಯ ಸುದ್ದಿ; ಬರುತ್ತಿದೆ ಊಹಿಸಲಾಗದ ಫೀಚರ್
ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಅನಧಿಕೃತ ಪಂಪ್ಸೆಟ್ ಹೊಂದಿದ್ರೆ ಈ ಸುದ್ದಿ ಓದಿ; ಕಾನೂನು ಕ್ರಮ ಫಿಕ್ಸ್!, ಯಾಕೆ ಗೊತ್ತಾ?












