ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಯುವಕನೊಬ್ಬ 7 ಬೇಡಿಕೆಗಳ ಪಟ್ಟಿ ಹಿಡಿದು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ.
ಇದನ್ನೂ ಓದಿ: ಅಕ್ರಮ ಪಂಪ್ ಸೆಟ್ ಹೊಂದಿರುವವರಿಗೆ ಇಂಧನ ಸಚಿವ ಕೊಟ್ರು ಸಿಹಿಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ

ಚಿಕ್ಕಮಗಳೂರು ತಾಲೂಕಿನ ಖಾಂಡ್ಯಾದ ಬಿದರೆ ಗ್ರಾಮದ ದೇವೇಂದ್ರ ಎಂಬ ಯುವಕ 101 ಬಾರಿ ಮುಳುಗಿ ಪ್ರಯಾಗ್ ರಾಜ್ ಗೆ ಹೋಗಲು ಆಗದವರ ಪರವಾಗಿಯೂ ಪುಣ್ಯ ಸ್ನಾನ ಮಾಡಿದ್ದು, ಕೈಯಲ್ಲಿ ಬೇಡಿಕೆಯ ಬ್ಯಾನರ್ ಹಿಡಿದು ಮುಳುಗೆದ್ದಿದ್ದಾನೆ.
ಇದನ್ನೂ ಓದಿ: ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ!; ಶೇ.90 ರಂತೆ ಸಹಾಯಧನ
* ಇನ್ನು ಬೇಡಿಕೆಗಳಲ್ಲಿ, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಸಂಪೂರ್ಣ ನಿಲ್ಲಬೇಕು.
* ಕರ್ನಾಟಕದಲ್ಲಿ 25 ವರ್ಷ ಮೇಲ್ಪಟ್ಟ ಹುಡುಗ, ಹುಡುಗಿ ಹುಡುಕುತ್ತಿರುವವರಿಗೆ ಕಂಕಣ ಭಾಗ್ಯ ಕೂಡಿಬರಲಿ.
* ಮಧ್ಯಮವರ್ಗದವರನ್ನು ಸರ್ಕಾರ ಗುರುತಿಸುವಂತಾಗಲಿ.
* ಕಾಲಕ್ಕೆ ತಕ್ಕಂತೆ ಮಳೆಯಾಗಿ ರೈತರ ಬೆಳೆ ಉತ್ತಮವಾಗಿ ಒಳ್ಳೆಯ ಬೆಲೆ ಸಿಗಲಿ.
* ಮಲೆನಾಡ ಒತ್ತುವರಿ ಸಮಸ್ಯೆ ಬಗೆಹರಿಯಲಿ, ಪ್ರಾಣಿಗಳಿಂದ ಆಗುತ್ತಿರುವ ಪ್ರಾಣ ಹಾನಿ ನಿಲ್ಲಲಿ.
* ರಾಜನ ಆಳ್ವಿಕೆ (ಗುಲಾಮಗಿರಿ) ಹೋಗಲಿ ಪ್ರಜೆಗಳು ರಾಜರಾಗಲಿ.
* ಕೊನೆಯಲ್ಲಿ ಈ ಬಾರಿ ಆರ್ ಸಿಬಿ ಅಭಿಯಾನಿಗಳ ಆಸೆ ಈಡೇರಲಿ, ಆರ್ ಸಿಬಿ ಐಪಿಎಲ್ ಕಪ್ ಗೆಲ್ಲಲಿ” ಎನ್ನುವ ಬೇಡಿಕೆಗಳ ಪಟ್ಟಿ ಹಿಡಿದು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಎಲ್ಲರ ಗಮನ ಸೆಳೆದಿದ್ದಾನೆ.
ಇದನ್ನೂ ಓದಿ: ಪೋಸ್ಟ್ ಆಫೀಸ್ ನಲ್ಲಿ ಜಾಬ್ ಆಫರ್; 10th ವಿದ್ಯಾರ್ಹತೆ, 21,413 ಹುದ್ದೆ; ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ ನೋಡಿ












