ಮೂಡಿಗೆರೆ: ಸೈನಿಕನಿಗೆ ಪ್ರಾಣ ತ್ಯಾಗವೇ ಪೂರ್ವ ಜನ್ಮದ ಪುಣ್ಯ: ಮಂಜುನಾಥ್

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಯುದ್ಧ ಭೂಮಿಯಲ್ಲಿ ಪ್ರಾಣ ಕಳೆದುಕೊಂಡರೆ ಅದು ಆ ಸೈನಿಕನ ಏಳು ಜನ್ಮಗಳ ಪುಣ್ಯ ಎಂದು ಜಿಲ್ಲಾ ಸೈನಿಕ ಸಂಘದ ಮಾಜಿ ಅಧ್ಯಕ್ಷ ಮಂಜುನಾಥ್ ತಿಳಿಸಿದರು.


ಇದನ್ನೂ ಓದಿ: BPL ಕಾರ್ಡ್‌ ಹೊಂದಿರುವವರಿಗೆ ಭರ್ಜರಿ ಗುಡ್‌ ನ್ಯೂಸ್; ಏನದು? ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಪಟ್ಟಣದದಲ್ಲಿ ಬಿಜೆಪಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಹಮ್ಮಿಕೊಂಡಿದ್ದ ತಿರಂಗ ಯಾತ್ರೆ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿ ಅವರು, ಯೋಧ ತನ್ನ ಪ್ರಾಣತ್ಯಾಗವೇ ದೇಶಕ್ಕೆ ನನ್ನ ಬಲಿದಾನ ಎಂಬ ಸ್ಫೂರ್ತಿಯ ಮೇಲೆ ದೇಶ ಕಾಯುವ ಸಂಕಲ್ಪ ಮಾಡಿರುತ್ತಾನೆ. ಸೈನಿಕರ ಸಾವಿನ ಲೆಕ್ಕ ಎಂದು ಯಾರೂ ಕೇಳಬಾರದು. ಅವನು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುತ್ತಾನೆ. ಆಪರೇಷನ್ ಸಿಂದೂರ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕೇವಲ ಮೂರು ದಿವಸದ ಯುದ್ಧದಲ್ಲಿ ಭಾರತ ಪಾಕಿಸ್ತಾನದ ಅನೇಕ ಏರ್ ಬೇಸ್ ಗಳನ್ನು ಉಡಾಯಿಸಿದೆ. ಅದೇ ರೀತಿ ನಮ್ಮ ಕ್ಷಿಪಣಿಗಳು ನೂರ್ಖಾನ್ ಏರ್ ಬೇಸ್ ಮೇಲೆ ಅಪ್ಪಳಿಸಿದ್ದರಿಂದ ಅಲ್ಲಿಂದ ಅಮೆರಿಕದ ಮತ್ತು ಪಾಕಿಸ್ತಾನದ ನ್ಯೂಕ್ಲಿಯರ್ ಬಾಂಬುಗಳ ಸ್ಥಾವರಕ್ಕೆ ಹಾನಿ ಉಂಟಾಗಿದ್ದು, ಅಲ್ಲಿ ಅದಂತ ವಿಕಿರಣ ಸೋರಿಕೆ ತಾತ್ಕಾಲಿಕ ಯುದ್ಧ ವಿರಾಮಕ್ಕೆ ಕಾರಣವಾಗಿದೆ.

ಶತ್ರು ದೇಶಕ್ಕೆ ಅಗಾಧ ನಷ್ಟ ಉಂಟುಮಾಡಿದ್ದು, ಪಾಕಿಸ್ತಾನದ ಸೊಕ್ಕನ್ನು ಮುರಿಯುವವರೆಗೆ ಯುದ್ಧ ನಿಲ್ಲದು ಎಂದು ಈಗಾಗಲೇ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ. ಮತ್ತು ಸೇನೆಯ ಎಚ್ಚರಿಕೆಯೂ ಕೂಡ ಅಗಿದೆ ಎಂದು ತಿಳಿಸಿದರು.


ಇದನ್ನೂ ಓದಿ: ಕೇಂದ್ರ ಸರ್ಕಾರದ ಯೋಜನೆ; ಪ್ರತಿ ತಿಂಗಳು ಸಿಗಲಿದೆ 5,000 ರೂ. ಪಿಂಚಣಿ


ಮಾಜಿ ಸೈನಿಕ ಚಂದ್ರೇಶ್ ಮಗ್ಗಲಮಕ್ಕಿ ಮಾತನಾಡಿ, ಭಾರತ ಸೇನೆಯ ಶಕ್ತಿ ಅಗಾಧವಾಗಿದ್ದು, ಆಪರೇಷನ್ ಸಿಂಧೂರದಿಂದ ಇದು ಜಗಜ್ಜಾಯಿರಾಗಿದೆ ನಂಬಿಕೆಯಿಂದಲೇ ಈ ಪ್ರಚಂಡ ಶಕ್ತಿಯಿಂದಲೇ ನಾವುಗಳು ಇಲ್ಲಿ ನಿಶ್ಚಿಂತೆಯಿಂದ ಇದ್ದೇವೆ. ಗಡಿಯಲ್ಲಿ ಇರುವ ಸೈನಿಕರೇ ನಮ್ಮ ರಕ್ಷಕರಾಗಿದ್ದು, ಯುದ್ಧಕಾಲದಲ್ಲಿ ಈ ರೀತಿಯ ಯಾತ್ರೆಗಳು ಏಕತೆ ಮೂಲಕ ಸೇನೆ ಮತ್ತು ದೇಶಕ್ಕೆ ಶಕ್ತಿ ತುಂಬಲಿದೆ ಎಂದು ತಿಳಿಸಿದರು.

ಇದಕ್ಕೂ ಮುಂಚೆ ಪಟ್ಟಣದ ವಿವಿಧ ಬೀದಿಗಳಲ್ಲಿ ತಿರಂಗದೊಂದಿಗೆ ನೂರಾರು ಜನರು ಕಾಶ್ಮೀರ ಭಾರತಮಾತೆ ಸಿಂಧೂರ ಎಂಬ ಘೋಷಣೆ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿದರು. (ವರದಿ- ತನು ಕೊಟ್ಟಿಗೆಹಾರ)


ಇದನ್ನೂ ಓದಿ: PUC ವಿದ್ಯಾರ್ಥಿಗಳಿಗೆ 3,500 ಸ್ಕಾಲರ್‌ ಶಿಪ್; 10th ನಲ್ಲಿ ಇಷ್ಟು ಪರ್ಸೆಂಟೇಜ್ ತೆಗೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.