ಕಳಸ: (ನ್ಯೂಸ್ ಮಲ್ನಾಡ್ ವರದಿ) ಕಳೆದ ಐದು ತಿಂಗಳ ಹಿಂದೆ ಮೂಡಿಗೆರೆಯ ಬಂಡಾಜೆ ಫಾಲ್ಸ್ʼಗೆ ತೆರಳುವ ಪ್ರವಾಸಿಗರಿಗೆ ನಕಲಿ ಟಿಕೆಟ್ ಮಾರಾಟ ಮಾಡುತ್ತಿದ್ದ ಚಂದನಗೌಡ ನನ್ನು ಸಸ್ಪೆಂಡ್ ಮಾಡಲಾಗಿತ್ತು. ಆದರೆ, ನಕಲಿ ಟಿಕೆಟ್ ಆರೋಪದ ಬಗ್ಗೆ ಸಮರ್ಪಕವಾಗಿ ತನಿಖೆಗೆ ನಡೆಸಿಲ್ಲ ಎಂದು ಪತ್ರಕರ್ತರಾದ ಎಚ್.ಎನ್. ಸತೀಶ್ ಜೈನ್ ಅವರು ಈಶ್ವರ ಬಿ. ಖಂಡ್ರೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಇಡೀ ಪ್ರಕರಣವನ್ನು ಸಿಐಡಿಗೆ ವಹಿಸಿ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಆದೇಶ ಹೊರಡಿಸಿದ್ದಾರೆ.

ಏನಿದು ನಕಲಿ ಟಿಕೆಟ್ ಪ್ರಕರಣ:
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಅರಣ್ಯ ವ್ಯಾಪ್ತಿಯಲ್ಲಿರುವ ಬಂಡಾಜೆ ಫಾಲ್ಸ್, ಬಲ್ಲಾಳರಾಯನ ದುರ್ಗ ಚಾರಣಕ್ಕೆ ಪ್ರವಾಸೋದ್ಯಮ ಇಲಾಖೆ ಚಾರಣಕ್ಕೆ ಆನ್ಲೈನ್ ಟಿಕೆಟ್ ಬುಕಿಂಗ್ ಆರಂಭಿಸಿತ್ತು. ಆದರೆ, ಆನ್ಲೈನ್ ಬುಕ್ಕಿಂಗ್ ಮಾಡಿಕೊಂಡು ಬಂದ ಪ್ರವಾಸಿಗರಿಗೆ ಅವಕಾಶ ನೀಡದೇ ತಾನು ನೀಡಿದ ನಕಲಿ ಟಿಕೆಟ್ ಪಡೆದ ಪ್ರವಾಸಿಗರಿಗೆ ಮಾತ್ರ ಚಾರಣಕ್ಕೆ ಅವಕಾಶ ನೀಡುತ್ತಿದ್ದರು. ಅಲ್ಲದೆ ಟಿಕೆಟ್ ನಲ್ಲಿ ಗೋಲ್ ಮಾಲ್ ಮಾಡಿ ಸರ್ಕಾರಕ್ಕೆ ಸೇರಬೇಕಿದ್ದ ಸಾವಿರಾರು ಹಣ ಪ್ರಿಯತಮೆಯ ಖಾತೆಗೆ ಜಮೆ ಮಾಡಿದ ಆರೋಪ ಕೂಡ ಕೇಳಿಬಂದಿತ್ತು.
ಇದನ್ನೂ ಓದಿ: ನಿವೃತ್ತ ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ; ಏನದು ಮಹತ್ವದ ಸುದ್ದಿ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೈಲ್ಸ್
ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್ ನೋಡಲು ಬರುವ ಪ್ರವಾಸಿಗರಿಗೆ ಆನ್‌ಲೈನ್ ನಕಲಿ ಟಿಕೆಟ್ ತಯಾರಿಸಿ ಪ್ರವಾಸಿಗರಿಗೆ ಮಾರಾಟ ಮಾಡಿ ಕೊಟ್ಟ ಹಣವನ್ನು ತನ್ನಲ್ಲಿಟ್ಟುಕೊಳ್ಳದೆ ಫೋನ್‌ಪೇ ಮೂಲಕ ಸುಮಾರು 9000 ರೂ. ಹಣವನ್ನ ಮೋನಿಕಾ ಎಂಬ ಯುವತಿ ಖಾತೆಗೆ ಜಮಾ ಮಾಡಿದ್ದಾರೆ ಎಂಬ ಆರೋಪವಿತ್ತು. ಈ ಹಿನ್ನಲೆ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಧಿಕಾರಿ ಚಂದನ್ ಸಸ್ಪೆಂಡ್ ಮಾಡಲಾಗಿತ್ತು. ಆದರೆ, ಹಿರಿಯ ಅಧಿಕಾರಿಗಳೂ ಇದರಲ್ಲಿ ಶಾಮೀಲಾದ ಕಾರಣ ತನಿಖೆ ಹಳ್ಳ ಹಿಡಿದಿದೆ ಎಂದು ಆರೋಪ ಮಾಡಿದ ಹಿನ್ನೆಲೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ನಕಲಿ ಟಿಕೆಟ್ ನ ಇಡೀ ಪ್ರಕರಣವನ್ನು ಸಿಐಡಿಗೆ ವಹಿಸಿ 7 ದಿನಗಳ ಒಳಗಾಗಿ ಪ್ರಸ್ತಾವನೆ ಸಲ್ಲಿಸುಂತೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಮಹತ್ಚದ ಆದೇಶ; ಏನದು ಆದೇಶ?












