ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಲೋಕಸಭೆ ಸಮರಕ್ಕೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ಕೈ – ಕಮಲದಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ತೀವ್ರ ಪೈಪೋಟಿ ಶುರುವಾಗಿದೆ. ಇದರ ಜೊತೆಗೆ ಆಕಾಂಕ್ಷಿಗಳು ಕ್ಷೇತ್ರ ಸುತ್ತಾಟದಲ್ಲಿ ನಿರತರಾಗಿದ್ದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಈ ನಡುವೆ ಹಾಲಿ ಸಂಸದೆ ಹಾಗೂ ಕೇಂದ್ರ ಸಚಿವೆಯಾಗಿರುವ ಶೋಭಾ ಕರಂದ್ಲಾಜೆಗೆ ಟಿಕೆಟ್ ಫೈನಲ್ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಇದೀಗ ಸ್ವಕ್ಷೇತ್ರದಲ್ಲೇ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ; ರೈತ ಸಿರಿ ಯೋಜನೆ; ಪ್ರತಿ ಹೆಕ್ಟೇರ್ ಗೆ 10,000 ಪ್ರೋತ್ಸಾಹ ಧನ; ಯೋಜನೆಯ ಉದ್ದೇಶ, ಅರ್ಹತೆ, ಬೇಕಾಗುವ ದಾಖಲೆ ಏನು?

ಟಿಕೆಟ್ ನೀಡದಂತೆ ಪತ್ರ ಬರೆಯುತ್ತಿರುವ ಕಾರ್ಯಕರ್ತರು:
ಬಿಜೆಪಿ ಕಾರ್ಯಕರ್ತರಿಂದಲೇ ಶೋಭಾ ಕರಂದ್ಲಾಜೆ ವಿರುದ್ಧ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡದಂತೆ ಪ್ರಧಾನಿ ನರೇಂದ್ರ ಮೋದಿ, ಜೆ.ಪಿ ನಡ್ಡಾ ಹಾಗೂ ವಿಜಯೇಂದ್ರ ಅವರಿಗೆ ಪತ್ರ ಬರೆಯುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸುಮಾರು 5 ಸಾವಿರಕ್ಕೂ ಅಧಿಕ ಪತ್ರವನ್ನು ಬಿಜೆಪಿ ಕಾರ್ಯಕರ್ತರು ಬರೆದಿದ್ದಾರೆ. ಅಲ್ಲದೆ ಎರಡು ಬಾರಿ ಸಂಸದೆಯಾಗಿ ಕ್ಷೇತ್ರ ಅಭಿವೃದ್ಧಿ ಮಾಡಿಲ್ಲ ಅವರಿಗೆ ಈ ಬಾರಿ ಟಿಕೆಟ್ ಬೇಡ. ಉತ್ತಮ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ.


ಇದನ್ನೂ ಓದಿ; ಆನೆ ದಾಳಿ: ಕೇರಳ ವ್ಯಕ್ತಿಯ ಸಾವಿಗೆ ರಾಜ್ಯದಿಂದ ಪರಿಹಾರ; ರಾಜ್ಯ ಸರ್ಕಾರ ಮಾನ-ಮರ್ಯಾದೆ ಎಲ್ಲ ಬಿಟ್ಟಿದೆ
ಕಳೆದ ಚುನಾವಣೆಯಲ್ಲಿಯೂ ಗೋಬ್ಯಾಕ್ ಶೋಭಾ ಅಭಿಯಾನ
ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲೂ ಶೋಭಾ ವಿರುದ್ಧ ಗೋ ಬ್ಯಾಕ್ ಶೋಭಾ ಅಭಿಯಾನ ಮಾಡಲಾಗಿತ್ತು. ಇದೀಗ ಮತ್ತೆ ಪತ್ರ ಬರೆಯುವ ಮೂಲಕ ವಿರೋಧ ವ್ಯಕ್ತವಾಗಿದೆ.
ಶೃಂಗೇರಿ ಭಾಗದಲ್ಲಿಯೂ ಶೋಭಾ ಕರಂದ್ಲಾಜೆ ವಿರುದ್ಧ ಕಾರ್ಯಕರ್ತರ ಕಿಡಿ:
ಇತ್ತೀಚೆಗೆ ಶೃಂಗೇರಿ ಭಾಗದಲ್ಲಿಯೂ ಕೂಡ ಶೋಭಾ ಕರಂದ್ಲಾಜೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು.
ಸಿ.ಟಿ ರವಿಗೆ ಟಿಕೆಟ್ ನೀಡುವಂತೆ ವಾಟ್ಸಪ್ ಸ್ಟೇಟಸ್ ಅಭಿಯಾನ:
ಒಂದೆಡೆ ಹಾಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡದಂತೆ ಪತ್ರ ಅಭಿಯಾನ ನಡೆಸುತ್ತಿದ್ದರೆ ಇನ್ನೊಂದಡೆ ಸಿ.ಟಿ ರವಿ ಗೆ ಟಿಕೆಟ್ ನೀಡುವಂತೆ ವಾಟ್ಸಪ್ ಸ್ಟೇಟಸ್ ಅಭಿಯಾನ ನಡೆಸಲಾಗುತ್ತಿದೆ. ಇದೀಗ ಸಿ.ಟಿ ರವಿ ವರ್ಸಸ್ ಶೋಭಾ ನಡುವೆ ಟಿಕೆಟ್ ವಿಚಾರವಾಗಿ ಬಣ ರಾಜಕೀಯ ಶುರುವಾಗಿದೆ.


ಜೀವರಾಜ್, ಸಿ.ಟಿ ರವಿ, ಪ್ರಮೋದ್ ಮಧ್ವರಾಜ್ ಅಥವಾ ಹೊಸಬರಿಗೆ ನೀಡುವಂತೆ ಅಭಿಯಾನ:
ಟಿಕೆಟ್ ಆಕಾಂಕ್ಷಿಗಳ ಪೈಕಿ ಜೀವರಾಜ್, ಸಿ.ಟಿ ರವಿ, ಪ್ರಮೋದ್ ಮಧ್ವರಾಜ್ ಅಥವಾ ಹೊಸಬರಿಗೆ ನೀಡುವಂತೆ ಅಭಿಯಾನ ಶುರುವಾಗಿದೆ. ಈ ನಡುವೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು, ನಾನು ಟಿಕೆಟ್ ಆಕಾಂಕ್ಷಿ ಎಂದು ಸಾರ್ವಜನಿಕವಾಗಿಯೇ ಹೇಳಿದ್ದಾರೆ. ವರಿಷ್ಠರು ನನಗೆ ಟಿಕೆಟ್ ನೀಡಿದರೆ ಈ ಭಾಗದಲ್ಲಿ ಎಲ್ಲಾ ವರ್ಗದವರ ಧ್ವನಿಯಾಗಬಲ್ಲೆ ಎಂದು ಪ್ರಮೋದ್ ಹೇಳಿದ್ದಾರೆ.
ಈ ಹಿಂದೆ ವಿಜಯೇಂದ್ರ ಚಿಕ್ಕಮಗಳೂರಿಗೆ ಆಗಮಿಸಿದ್ದ ವೇಳೆ ಲೋಕಸಭಾ ಟಿಕೆಟ್ ಸಿ.ಟಿ ರವಿ ನೀಡುವಂತೆ ಕಾರ್ಯಕರ್ತರು ಮನವಿ ಮಾಡಿದ್ದರು. ಇದೀಗ ಬಿಜೆಪಿ ಕಾರ್ಯಕರ್ತರ ನಡುವೆಯೇ ಬಣ ರಾಜಕೀಯ ಶುರುವಾಗಿದ್ದು, ಲೋಕಸಭಾ ಟಿಕೆಟ್ ಯಾರ ಪಾಲಾಗುತ್ತದೆ ಎಂದು ಕಾದುನೋಡಬೇಕಿದೆ.
ಕೊಪ್ಪ: ಗ್ರಾಮ ಪಂಚಾಯಿತಿಯ ಹಾಲಿ ಸದಸ್ಯ ಮತ್ತು ಮಾಜಿ ಅಧ್ಯಕ್ಷರ ಸದಸ್ಯತ್ವ ವಜಾ!
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮ ಪಂಚಾಯ್ತಿ ಹಾಲಿ ಸದಸ್ಯ ಮತ್ತು ಮಾಜಿ ಅಧ್ಯಕ್ಷರನ್ನು 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಇಲ್ಲಿನ ಹಾಲಿ ಸದಸ್ಯ ಮತ್ತು ಮಾಜಿ ಅಧ್ಯಕ್ಷರಾದ ಶಿವಾಕರ್ ಎಸ್ ಶೆಟ್ಟಿಯವರು ಕರ್ತವ್ಯ ಲೋಪ ಹಾಗೂ ಹಣ ದುರುಪಯೋಗ ಸಾಬೀತಾದ ಹಿನ್ನೆಲೆ ಚುನಾವಣೆಗೆ ನಿಲ್ಲದಂತೆ ನಿರ್ಬಂಧಿಸಿ ಆದೇಶ ಹೊರಡಿಸಿ ಸದಸ್ಯತ್ವ ವಜಾಗೊಳಿಸಲಾಗಿದೆ.
ಇದನ್ನೂ ಓದಿ; ಕರ್ನಾಟಕ ಸರ್ಕಾರದಿಂದ ಲ್ಯಾಪ್ ಟಾಪ್ ಭಾಗ್ಯ; ಉಚಿತ ಲ್ಯಾಪ್ ಟಾಪ್ ಪಡೆಯಲು ಅರ್ಜಿ ಸಲ್ಲಿಸಿ
34 ಲಕ್ಷ ಹಣ ದುರಪಯೋಗ!
ಶಿವಾಕರ್ ಎಸ್ ಶೆಟ್ಟಿ ಶಾನುವಳ್ಳಿ ಗ್ರಾ.ಪಂ ಅಧ್ಯಕ್ಷರಾಗಿದ್ದ ಸಮಯದಲ್ಲಿ 2016-17ನೇ ಸಾಲಿನಲ್ಲಿ ಕೆಲ ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸದೇ, ಎಂ ಬಿ ದಾಖಲಿಸದೇ ಸರ್ಕಾರದ ಹಣವನ್ನು ಚೆಕ್ ಮೂಲಕ ನಗದೀಕರಿಸಿದ ಆರೋಪವನ್ನು ಎದುರಿಸುತ್ತಿದ್ದರು. ಇದೀಗ ಕರ್ತವ್ಯ ಲೋಪ ಮತ್ತು ಸುಮಾರು 34 ಲಕ್ಷ ರೂ. ಹಣ ದುರುಪಯೋಗ ಸಾಬೀತಾದ ಹಿನ್ನೆಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಆದೇಶ ಹೊರಡಿಸಿದ್ದಾರೆ.












