ಪ್ರವಾಸಕ್ಕೆ ಬಂದವರ ಹಣ ಪ್ರೇಯಸಿಯ ಖಾತೆಗೆ

ಕಳಸ: (ನ್ಯೂಸ್ ಮಲ್ನಾಡ್ ವರದಿ) ಚಾರಣಕ್ಕೆ ತೆರಳುವ ಪ್ರವಾಸಿಗರಿಗೆ ನಕಲಿ ಟಿಕೆಟ್ ಮಾರಾಟ ಮಾಡುತ್ತಿದ್ದ DRFO ಅನ್ನು ಸಸ್ಪೆಂಡ್ ಮಾಡಿರುವ ಘಟನೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆದಿದೆ. ಅರಣ್ಯ ಇಲಾಖೆಯ ಉಪ ವಲಯ ಅರಣ್ಯಧಿಕಾರಿ ಚಂದನ್ ಸಸ್ಪೆಂಡ್ ಆದ ಅಧಿಕಾರಿ.


ಇದನ್ನೂ ಓದಿ: ಪಂಪ್ ಸೆಟ್ ಹೊಂದಿರುವವರಿಗೆ ದಂಡ ಫಿಕ್ಸ್; ಯಾಕೆ ಗೊತ್ತಾ…? ಮಿಸ್ ಮಾಡ್ದೆ ಈ ಸುದ್ದಿ ಓದಿ


ಏನಿದು ಘಟನೆ:
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಅರಣ್ಯ ವ್ಯಾಪ್ತಿಯಲ್ಲಿರುವ ಬಂಡಾಜೆ ಫಾಲ್ಸ್, ಬಲ್ಲಾಳರಾಯನ ದುರ್ಗ ಚಾರಣಕ್ಕೆ ಆನ್ ಲೈನ್ ಟಿಕೆಟ್ ನಕಲು ಮಾಡಿ ಪ್ರವಾಸಿಗರಿಗೆ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಧಿಕಾರಿ ಚಂದನ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ನಕಲಿ ಟಿಕೆಟ್ ಪಡೆದ ಪ್ರವಾಸಿಗರಿಗೆ ಮಾತ್ರ ಚಾರಣಕ್ಕೆ ಅವಕಾಶ:
ಪ್ರವಾಸೋದ್ಯಮ ಇಲಾಖೆ ಚಾರಣಕ್ಕೆ ಆನ್ಲೈನ್ ಟಿಕೆಟ್ ಬುಕಿಂಗ್ ಆರಂಭಿಸಿದೆ. ಅನ್ಲೈನ್ ಬುಕ್ಕಿಂಗ್ ಮಾಡಿಕೊಂಡು ಬಂದರೂ ಅವಕಾಶ ನೀಡುತ್ತಿಲ್ಲ ಎಂದು DRFO ಚಂದನ್ ವಿರುದ್ಧ ಪ್ರವಾಸಿಗರು ನಿರಂತರ ದೂರು ನೀಡಿದ್ದರು. ಈಗಾಗಲೇ ಸಾವಿರಾರು ಟ್ರೆಕ್ಕಿಂಗ್ ಟಿಕೆಟ್ ನಕಲು ಮಾಡಿ ಮಾರಾಟ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದವರಿಗೆ ಚಾರಣಕ್ಕೆ ಅವಕಾಶ ನೀಡದೆ, ತಾನು ನೀಡಿದ ನಕಲಿ ಟಿಕೆಟ್ ಪಡೆದ ಪ್ರವಾಸಿಗರಿಗೆ ಮಾತ್ರ ಚಾರಣಕ್ಕೆ ಅವಕಾಶ ನೀಡುತ್ತಿದ್ದರು ಎಂದು ತಿಳಿದು ಬಂದಿದ್ದು, ಇದೀಗ ವಿಡಿಯೋ ಸಮೇತ ದೂರು ನೀಡಿದ್ದಾರೆ.


ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 50,000 ಸ್ಕಾಲರ್ ಶಿಪ್; ಈ ಷರತ್ತು ಅನ್ವಯ!


DRFO ಆಗಿದ್ದ ಚಂದನ್ ಅವರನ್ನು ಅಮಾನತು ಮಾಡಿ ಚಿಕ್ಕಮಗಳೂರು ಜಿಲ್ಲಾ CCF ಉಪೇಂದ್ರ ಪ್ರತಾಪ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಜೊತೆಗೆ ನಕಲಿ ಟಿಕೆಟ್ ಜಾಲದ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದಾರೆ.

ಸರ್ಕಾರದ ಹಣ ಫೋನ್ ಪೇ ಮೂಲಕ ಪ್ರಿಯತಮೆ ಖಾತೆಗೆ…?:
ಟಿಕೆಟ್ ನಲ್ಲಿ ಗೋಲ್ ಮಾಲ್ ಮಾಡಿ ಸರ್ಕಾರಕ್ಕೆ ಸೇರಬೇಕಿದ್ದ ಸಾವಿರಾರು ಹಣ ಪ್ರಿಯತಮೆಯ ಖಾತೆಗೆ ಜಮೆ ಮಾಡಿದ ಆರೋಪ ಕೇಳಿಬಂದಿದೆ.

ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್ ನೋಡಲು ಬರುವ ಪ್ರವಾಸಿಗರಿಗೆ ಆನ್‌ಲೈನ್ ನಕಲಿ ಟಿಕೆಟ್ ತಯಾರಿಸಿ ಪ್ರವಾಸಿಗರಿಗೆ ಮಾರಾಟ ಮಾಡಿ ಕೊಟ್ಟ ಹಣವನ್ನು ತನ್ನಲ್ಲಿಟ್ಟುಕೊಳ್ಳದೆ ಫೋನ್‌ಪೇ ಮೂಲಕ ಸುಮಾರು 9000 ರೂ. ಹಣವನ್ನ ಮೋನಿಕಾ ಎಂಬ ಯುವತಿ ಖಾತೆಗೆ ಜಮಾ ಮಾಡಿದ್ದಾರೆ ಎಂಬ ಆರೋಪವಿದೆ.

ಮದ್ಯ ಚೆಕ್ ಮಾಡಲು ತೆರಳಿದ್ದ ಪೊಲೀಸರಿಗೆ ಶಾಕ್:
ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್ ಗೆ ಮೋಜುಮಸ್ತಿಗೆಂದು ಬರುವ ಪ್ರವಾಸಿಗರೇ ಹೆಚ್ಚು. ಮದ್ಯಪಾನ ಮಾಡಿ ನೋಡಲು ಬಂದು ಈ ಹಿಂದೆ ಅನಾಹುತಗಳು ನಡೆದಿದೆ. ಈ ಹಿನ್ನೆಲೆ ಪ್ರವಾಸಿಗರ ಬಳಿ ಮದ್ಯ ಚೆಕ್ ಮಾಡಲು ತೆರಳಿದ್ದ ಪೊಲೀಸರಿಗೆ 200ಕ್ಕೂ ಅಧಿಕ ಪ್ರವಾಸಿಗರು ಸೀಜ್ ಆಗಿದ್ದಾರೆ.


ಇದನ್ನೂ ಓದಿ: ಕೊನೆ ಹಂತದಲ್ಲಿ HSRP ನಂಬರ್ ಪ್ಲೇಟ್ ಅಳವಡಿಕೆಯ ನಿಯಮ ಚೇಂಚ್; HSRP ನಂಬರ್ ಪ್ಲೇಟ್ ಈ ವಾಹನಗಳಿಗೆ ಮಾತ್ರ ಅನ್ವಯ!


ಹೌದು, ಪ್ರವಾಸಿಗರನ್ನ ತಪಾಸಣೆ ಮಾಡಿದಾಗ ಸುಮಾರು 200ಕ್ಕೂ ಅಧಿಕ ಜನರಿಗೆ ಟಿಕೆಟ್ ಇಲ್ಲದೆ ಫಾಲ್ಸ್ ವೀಕ್ಷಣೆಗೆ ಪ್ರವೇಶ ನೀಡಿರುವುದು ಕಂಡುಬಂದಿದೆ. ಮದ್ಯ ಚೆಕ್ ಮಾಡಲು ಹೋಗಿದ್ದ ಪೊಲೀಸರಿಗೆ ಟಿಕೆಟ್ ಗೋಲ್ ಮಾಲ್ ನಡೆದಿರುವುದು ಗೊತ್ತಾಗಿದೆ.

ಈ ಬಗ್ಗೆ ಪರಿಶೀಲನೆ ನಡೆಸಿದಾಗ ಜೂನ್ ತಿಂಗಳ ಆನ್‌ಲೈನ್ ಟಿಕೆಟ್‌ ಬುಕ್ಕಿಂಗ್‌ಗೂ ಪ್ರವಾಸಿಗರ ನೋಂದಣಿ ಪುಸ್ತಕಕ್ಕೂ ಸಂಬಂಧವೇ ಇಲ್ಲ. ಭಾರೀ ವ್ಯತ್ಯಾಸ ಕಂಡು ಬಂದ ಹಿನ್ನೆಲೆ DRFO ನಕಲಿ ಟಿಕೆಟ್ ಮಾರಾಟ ಮಾಡಿರುವ ಬಗ್ಗೆ ಸಂದೇಹ ಬಂದಿದೆ. ಇದೇ ವೇಳೆ ಮೋನಿಕಾ ಎಂಬ ಯುವತಿಗೆ 9000 ರೂ. ಫೋನ್‌ ಪೇ ಮೂಲಕ ಕಳಿಸಿರುವುದು ಗೊತ್ತಾಗಿದೆ. ಈ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾ CCF ಉಪೇಂದ್ರ ಪ್ರತಾಪ್ ಸಿಂಗ್ ಕೂಡಲೇ ಅಮಾನತ್ತು ಆದೇಶ ಹೊರಡಿಸಿದ್ದಾರೆ.


ಇದನ್ನೂ ಓದಿ: ಬಿಪಿಎಲ್ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ; ಇನ್ಮುಂದೆ ಅಕ್ಕಿಯ ಹಣದ ಬದಲು ಈ ದಿನಸಿಗಳು ನೀಡಲು ಚಿಂತನೆ; ಏನದು? ಇಲ್ಲಿದೆ ನೋಡಿ ಡಿಟೈಲ್ಸ್


Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.