ಜಯಪುರ: ಕರಾಟೆ ಬೆಲ್ಟ್ ಪರೀಕ್ಷೆಯಲ್ಲಿ 33 ಮಕ್ಕಳು ಯಶಸ್ವಿ ತೇರ್ಗಡೆ

ಜಯಪುರ: (ನ್ಯೂಸ್‌ ಮಲ್ನಾಡ್‌ ವರದಿ) ಐಡಿಯಲ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಕರಾಟೆ ಆಸೋಸಿಯೇಷನ್ ಚಿಕ್ಕಮಗಳೂರು ವತಿಯಿಂದ ಪಾಂಚಜನ್ಯ ವಿದ್ಯಾಸಂಸ್ಥೆಯಲ್ಲಿ ನಡೆದ ಕರಾಟೆ ಬೆಲ್ಟ್ ಪರೀಕ್ಷೆಯಲ್ಲಿ 33 ಮಕ್ಕಳು ಭಾಗವಹಿಸಿ ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ.


ಇದನ್ನೂ ಓದಿ: ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ; ಸರ್ಕಾರದ ಹೊಸ ನಿಯಮ


ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ಉಪಾಧ್ಯಕ್ಷರಾದ ಶಿಹಾನ್ ವಿನೋದ್ ಎಸ್.ಎಲ್. ಶಿವಮೊಗ್ಗ ಅವರ ನೇತೃತ್ವದಲ್ಲಿ ಬೆಲ್ಟ್ ಪರೀಕ್ಷೆಯನ್ನು ನಡೆಸಲಾಯಿತು.

ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಸಂಸ್ಥೆಯ ಕಾರ್ಯದರ್ಶಿ ಮಳಿಗೆ ಚಂದ್ರಶೇಖರ್, ಮುಖ್ಯ ಶಿಕ್ಷಕಿ ಉಷಾ ಹಾಗೂ ಶಿಕ್ಷಕರಾದ ವಸಂತ್ ಅವರು ಬೆಲ್ಟ್ ಪ್ರಮಾಣಪತ್ರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಐಡಿಯಲ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಕಿಬ್ಳಿ ಪ್ರಸನ್ನಕುಮಾರ್, ಕಾರ್ಯದರ್ಶಿ ವಿಶ್ವನಾಥ್ ಎಸ್ ಹಾಗೂ ಕರಾಟೆ ಶಿಕ್ಷಕರಾದ ಮಣಿಕಂಠ ಪಿ.ವಿ.ಎಸ್ ಮತ್ತು ಸಂಸ್ಥೆಯ ಶಿಕ್ಷಕರು ಮಕ್ಕಳನ್ನು ಅಭಿನಂದಿಸಿದರು. (ವರದಿ: ಶಶಿ ಬೆತ್ತದಕೊಳಲು)


ಇದನ್ನೂ ಓದಿ: LPG ಗ್ರಾಹಕರಿಗೆ ಮಹತ್ವದ ಸೂಚನೆ; ಆಧಾರ್‌ ಇ ಕೆವೈಸಿ ಮಾಡದಿದ್ರೆ ಸಿಗಲ್ಲ ಸಿಲಿಂಡರ್‌ !


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.