ಚಿಕ್ಕಮಗಳೂರು ಸಮೀಪದ ಜ್ಯೋತಿ ನಗರದಲ್ಲಿರುವ ಕ್ರಿಸ್ತ ರಾಜರ ದೇವಾಲಯದ 31ನೇ ವಾರ್ಷಿಕ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಇದನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ

ಚಿಕ್ಕಮಗಳೂರು ಕಥೋಲಿಕ ಕ್ರೈಸ್ತ ಧರ್ಮ ಪೀಠದ ಧರ್ಮಾದ್ಯಕ್ಷರಾದ ಡಾ.ಟಿ. ಅಂತೋಣಿ ಸ್ವಾಮಿಯವರು 25 ಧರ್ಮ ಕೇಂದ್ರಗಳ ಗುರುಗಳ ಸಹಭಾಗಿತ್ವದೊಂದಿಗೆ ಹಬ್ಬದ ಬಲಿ ಪೂಜೆಯನ್ನು ಅರ್ಪಿಸಿ, ಏಸುಕ್ರಿಸ್ತರ ಶಾಂತಿ ಮಾರ್ಗವನ್ನು ಅನುಸರಿಸಿ ಜಗತ್ತಿನ ಸರ್ವರ ಜನಮನವನ್ನು ಗೆಲ್ಲುವಂತಹ ಮಾದರಿ ಜೀವನ ನಡೆಸಬೇಕು. ಯೇಸುವಿನ ಆದರ್ಶದಲ್ಲಿ ನಡೆದು ನಿಸ್ವಾರ್ಥಿಗಳಾಗಿ ಸೇವೆ ಸಲ್ಲಿಸಬೇಕೆಂದು ಭಕ್ತಾದಿಗಳಿಗೆ ಹಬ್ಬದ ಸಂದೇಶವನ್ನು ನೀಡಿದರು.
ಕ್ರಿಸ್ತ ರಾಜರ ದೇವಾಲಯ ಧರ್ಮ ಕೇಂದ್ರ 1994ರಲ್ಲಿ ಪ್ರಾರಂಭವಾಗಿದ್ದು, ಇದುವರೆಗೂ 5 ಧರ್ಮ ಗುರುಗಳು ಸೇವೆ ಸಲ್ಲಿಸಿದ್ದಾರೆ. ಮತ್ತು ಚರ್ಚ್ ವ್ಯಾಪ್ತಿಯಲ್ಲಿ ನಾಲ್ಕು ವಿಭಾಗಗಳಿದ್ದು 98 ಕುಟುಂಬಗಳು ಒಟ್ಟು ಸೇರಿ ಹಬ್ಬದ ಆಚರಣೆಗೆ ಸಹಕರಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಫಾದರ್ ಕೋಲೀನ್ ಮತ್ತು ವಿವಿಧ ಧರ್ಮ ಕೇಂದ್ರಗಳಿಂದ ಗುರುಗಳು ಭಾಗವಹಿಸಿದ್ದು ಬಲಿ ಪೂಜೆ ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಸಹ ಭೋಜನ ಆಯೋಜಿಸಲಾಗಿತ್ತು.
ಇದನ್ನೂ ಓದಿ: ಆಲದ ಮರದ ನೆರಳಿನಲ್ಲಿ ಶುರುವಾದ ಭಾರತೀಯ ಸ್ಟಾಕ್ ಮಾರ್ಕೆಟ್ – ಇಂದು 400 ಲಕ್ಷ ಕೋಟಿಯ ಮೌಲ್ಯ!












