ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಶಾಂತಿಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಪ್ರಾರಂಭವಾಗಿ 75 ವರ್ಷ ಕಳೆದಿದ್ದು, ಹೀಗಾಗಿ ಸುತ್ತಮುತ್ತಲಿನ ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು, ಪೋಷಕರೆಲ್ಲ ಸೇರಿ ಏಪ್ರಿಲ್ 28 ಮತ್ತು 29ರಂದು ʼಅಮೃತ ಮಹೋತ್ಸವʼ ಕಾರ್ಯಕ್ರಮವನ್ನು ಆಚರಿಸುವ ಕುರಿತಂತೆ ಭಾನುವಾರ ಸಂಜೆ ಶಾಲೆಯಲ್ಲಿ ಸಭೆ ನಡೆಸಲಾಯಿತು.

ಇದನ್ನೂ ಓದಿ: ಈ ಕುಟುಂಬಗಳಿಗೆ ಎಲ್ಪಿಜಿ ಗ್ಯಾಸ್ ಸಿಗಲ್ಲ; ಸರ್ಕಾರದ ಹೊಸ ನಿಯಮ

ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ಶೆಟ್ಟಿ ಮಾತನಾಡಿ, ಅಮೃತ ಮಹೋತ್ಸವ ನಮ್ಮ ಶಾಲೆಯ ಕನಸಿನ ಕಾರ್ಯಕ್ರಮ. ಶತಮಾನೋತ್ಸವ ಮಾಡಲು ಅವಕಾಶ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ, ಈ ಅಮೃತ ಮಹೋತ್ಸವ ಕಾರ್ಯಕ್ರಮ ಮಾಡಲು ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ. ಹೀಗಾಗಿ ಕಾರ್ಯಕ್ರಮವನ್ನು ಎಲ್ಲರ ಸಲಹೆ ಸಹಕಾರದಿಂದ ಅದ್ಧೂರಿಯಾಗಿ ಮಾಡೋಣ. ಕೆಲಸ ಕಾರ್ಯಗಳಿಗೆ ನಮ್ಮೊಂದಿಗೆ ಕೈ ಜೋಡಿಸಿ. ನಿಮ್ಮ ಮನೆಯ ಹಬ್ಬವೆಂದು ಭಾವಿಸಿ ಸಲಹೆ ಸಹಕಾರ ನೀಡಿ ಎಂದರು.

ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಶ್ರೇಣಿಕ್ ಜೈನ್ ಮಾತನಾಡಿ, ಈ ಸಂಭ್ರಮ ಕೇವಲ ಶಾಲೆಯದ್ದಲ್ಲ ಇಡೀ ಸುತ್ತಮುತ್ತಲಿನ ಗ್ರಾಮ ಹಾಗೂ ಹಳೆ ವಿದ್ಯಾರ್ಥಿಗಳದ್ದು. ಹೀಗಾಗಿ ಎಲ್ಲರ ಸಲಹೆ ಸಹಕಾರ ಮುಖ್ಯ. ಮುಂದಿನ ದಿನಗಳಲ್ಲಿ ಇವತ್ತಿನ ಸಭೆಗಿಂತ ಹೆಚ್ಚಿನ ಜನರು ಬರಬೇಕು, ಎಲ್ಲರೂ ಅವರವರಿಗೆ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.
ಇದನ್ನೂ ಓದಿ: ಮಾ.18 ರಿಂದ SSLC ಪರೀಕ್ಷೆ ಆರಂಭ; ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ
ಸಭೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ಹಂಚಲಾಯಿತು. ಸಭೆಯಲ್ಲಿ ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಕೆ ಆರ್ ವೇಣುಗೋಪಾಲ್, ಶಾಲಾ ಶಿಕ್ಷಕರು, ಪೋಷಕರು,ವಿವಿಧ ಸಮಿತಿಯ ಪದಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು. (ವರದಿ- ಶಶಿ ಬೆತ್ತದಕೊಳಲು)













