ಬೀರೂರು: (ನ್ಯೂಸ್ ಮಲ್ನಾಡ್ ವರದಿ) ಕುರಿ ಮಂದೆ ಮೇಲೆ ನಾಯಿಗಳು ದಾಳಿ ಮಾಡಿದ್ದರಿಂದ 20 ಕುರಿಗಳು ಮೃತಪಟ್ಟಿವೆ.
ಇದನ್ನೂ ಓದಿ: ಬಿಹಾರ ಚುನಾವಣೆ ಫಲಿತಾಂಶ; ಅಭೂತಪೂರ್ವ ಜಯದತ್ತ ಹೆಜ್ಜೆ ಹಾಕಿದ ಎನ್ಡಿಎ

ಹಿರಿಯೂರು ತಾಲೂಕಿನ ಪಿಲಾಜನಹಳ್ಳಿಯ ಶಿವಪ್ಪ ಎಂಬುವವರು ಸುಮಾರು 400 ಕುರಿಗಳಿರುವ ಮಂದೆಯನ್ನು ಜೋಡಿತಿಮ್ಮಾಪುರದ ಗ್ರಾಮದ ಕುಮಾರ ಎಂಬುವವರ ತೆಂಗಿನ ತೋಟದಲ್ಲಿ ನಿಲ್ಲಿಸಿದ್ದರು. ಕುರಿಗಳನ್ನು ಮೇಯಿಸಲು ಹೋದಾಗ ಏಕಾಏಕಿ 40ಕ್ಕೂ ಹೆಚ್ಚು ಕುರಿಗಳ ಮೇಲೆ ನಾಯಿಗಳು ದಾಳಿ ನಡೆಸಿವೆ. ಈ ಪೈಕಿ 20 ಕುರಿಗಳು ನಾಯಿಕಡಿತದಿಂದ ಮೃತಪಟ್ಟಿವೆ.
ಹಿರಿಯೂರಿನಿಂದ ವಲಸೆ ಬಂದಿರುವ ನಾವು ಜಮೀನು ಹಾಗೂ ತೋಟಗಳಲ್ಲಿ ಕುರಿಗಳನ್ನು ನಿಲ್ಲಿಸುತ್ತೇವೆ. ಜಮೀನುಗಳಲ್ಲಿ ದಿನಕ್ಕೆ ಇಷ್ಟು ಎಂದು ಹಣ ಪಡೆಯುತ್ತಾರೆ. ಇಂತಹ ಸಮಯದಲ್ಲಿ ನಾಯಿಗಳ ದಾಳಿಗೆ 20 ಕುರಿಗಳು ಮೃತಪಟ್ಟಿರುವುದರಿಂದ ನಮಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಶಿವಪ್ಪ ಅಳಲು ತೋಡಿಕೊಂಡರು.
ಇದನ್ನೂ ಓದಿ: ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಇನ್ನಿಲ್ಲ
ಪಶು ವೈದ್ಯಾಧಿಕಾರಿ ಡಾ.ಮೋಹನ್ ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು, ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












