ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ರಸ್ತೆಯ ಸೇತುವೆ ಮೇಲಿನಿಂದ ಭದ್ರಾ ನದಿಗೆ ಶುಕ್ರವಾರ ರಾತ್ರಿ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನನ್ನು ಪೊಲೀಸರು ಹಾಗೂ ಸ್ಥಳೀಯರು ರಕ್ಷಿಸಿದ್ದಾರೆ.
ಇದನ್ನೂ ಓದಿ: 60% ಅಂಕ ಪಡೆದ ವಿದ್ಯಾರ್ಥಿಗಳಿಗೆ 50,000 ಸ್ಕಾಲರ್ ಶಿಪ್

ಎನ್.ಆರ್.ಪುರ ರಸ್ತೆಯ ಅನಿಕೇತ್(27) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಈತ ಚಿಕ್ಕಮಗಳೂರು-ಬಾಳೆಹೊನ್ನೂರು ಮುಖ್ಯ ರಸ್ತೆಯಲ್ಲಿರುವ ಭದ್ರಾ ನದಿ ಸೇತುವೆ ಮೇಲೆ ಶುಕ್ರವಾರ ರಾತ್ರಿ ಬೈಕ್ ನಿಲ್ಲಿಸಿ, ಚಪ್ಪಲಿಯನ್ನು ಬಿಟ್ಟು ನದಿಗೆ ಹಾರಿದ್ದಾನೆ.
ಅದೇ ಸೇತುವೆ ಮೇಲೆ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಯುವಕ ನೀರಿಗೆ ಹಾರಿದ್ದನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದ ರೈತರಿಗೆ ಎಚ್ಚರಿಕೆ; ಪಿಎಂ ಕಿಸಾನ್ ಹಣ 110 ಕೋಟಿ ವಂಚನೆ!
ಸ್ಥಳಕ್ಕೆ ಪಿಎಸ್ಐ ರವೀಶ್ ಹಾಗೂ ಸಿಬ್ಬಂದಿ ಸೇತುವೆ ಬಳಿ ತೆರಳಿ ಪರಿಶೀಲಿಸಿದಾಗ ಯುವಕ ಸೇತುವೆಯಿಂದ 150 ಮೀಟರ್ ದೂರದಲ್ಲಿ ನದಿ ಮಧ್ಯದಲ್ಲಿ ಮರವೊಂದನ್ನು ಹಿಡಿದು ಕಾಪಾಡಿ ಕಾಪಾಡಿ ಎಂದು ಕೂಗುತ್ತಿರುವುದು
ಕೇಳಿಬಂದಿದೆ. ಸ್ಥಳೀಯ ಈಜುಗಾರರು ನದಿಗೆ ಹಾರಿ ಆತನನ್ನು ರಕ್ಷಿಸಲು ಯತ್ನಿಸಿದರೂ ಮಳೆ ಹಾಗೂ ನೀರಿನ ಹರಿವು ಹೆಚ್ಚಾಗಿದ್ದರಿಂದ ರಕ್ಷಣೆ ಸಾಧ್ಯವಾಗಿಲ್ಲ. ನಂತರ ನದಿಗೆ ಹಗ್ಗ ಇಳಿಬಿಟ್ಟು ಈಜುಗಾರರ ನೆರವಿನೊಂದಿಗೆ ರಕ್ಷಿಸಿದರು.












