ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಬಿರಿಯಾನಿ ಭಾಗ್ಯ ಒದಗಿಸುವ ಯೋಜನೆಯನ್ನು ಬಿಬಿಎಂಪಿ ಜಾರಿಗೊಳಿಸಿದೆ. ಆದರೆ, ಕಾಫಿನಾಡು ಚಿಕ್ಕಮಗಳೂರಿನ ನಾಯಿಗಳಿಗೆ ಉಪವಾಸ ಭಾಗ್ಯವನ್ನು ಚಿಕ್ಕಮಗಳೂರು ನಗರಸಭೆ ನೀಡಿದೆ.
ಇದನ್ನೂ ಓದಿ: 60% ಅಂಕ ಪಡೆದ ವಿದ್ಯಾರ್ಥಿಗಳಿಗೆ 50,000 ಸ್ಕಾಲರ್ ಶಿಪ್

ಹೌದು, ಚಿಕ್ಕಮಗಳೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಜನರ ಮೇಲೆ ದಾಳಿ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿ ಉಳಿದ ಆಹಾರವನ್ನ ಬೀದಿ ನಾಯಿಗಳಿಗೆ ಹಾಕುವಂತಿಲ್ಲ. ಒಂದು ವೇಳೆ ಬೀದಿ ನಾಯಿಗಳಿಗೆ ಆಹಾರ ಹಾಕುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚಿಕ್ಕಮಗಳೂರು ನಗರಸಭೆಯಿಂದ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: ರಾಜ್ಯದ ರೈತರಿಗೆ ಎಚ್ಚರಿಕೆ; ಪಿಎಂ ಕಿಸಾನ್ ಹಣ 110 ಕೋಟಿ ವಂಚನೆ!
ಸಾಕಿದ ನಾಯಿಗಳನ್ನ ಮಾಲೀಕರೇ ಕಟ್ಟಿಕೊಳ್ಳಬೇಕು, ಅದು ಅವರ ಜವಾಬ್ದಾರಿ. ಮನೆಯಲ್ಲಿ ಉಳಿದ ಆಹಾರವನ್ನ ಬೀದಿ ನಾಯಿಗಳಿಗೆ ಹಾಕುವಂತಿಲ್ಲ. ಜನ ನಾಯಿಗಳಿಗೆ ಆಹಾರ ಹಾಕುವುದರಿಂದ ನಾಯಿಗಳ ಸಂಖ್ಯೆ ಹೆಚ್ಚಾಗಿ ಜನರ ಮೇಲೆ ದಾಳಿ ಮಾಡುತ್ತಿದೆ. ಹೀಗಾಗಿ, ಜನಸಾಮಾನ್ಯರು ಬೀದಿ ನಾಯಿಗಳಿಗೆ ಆಹಾರ ಹಾಕುವಂತಿಲ್ಲ. ಜನ ಬೀದಿ ನಾಯಿಗಳಿಗೆ ಆಹಾರ ಹಾಕುವುದು ಕಂಡು ಬಂದರೆ ಸುಪ್ರೀಂ ಕೋರ್ಟ್ ಆದೇಶದಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕೃತ ಆದೇಶ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ: AI ಕ್ರಾಂತಿಗೆ ಹೆಜ್ಜೆ; ಯತಿಕಾರ್ಪ್ನಿಂದ 10,000 ಮಂದಿಗೆ 20,000 ಮೌಲ್ಯದ ಉಚಿತ AI ಶಿಕ್ಷಣ ಕಿಟ್












