ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಪಶ್ಚಿಮಘಟ್ಟದ ನಿಷೇಧಿತ ಅರಣ್ಯ ಪ್ರದೇಶ ಚಾರ್ಮಾಡಿ ಘಾಟ್ನ ಬಿದಿರುತಳ ಎಂಬಲ್ಲಿ ಅನುಮತಿಯಿಲ್ಲದೆ ಶನಿವಾರ ಚಾರಣಕ್ಕೆ ತೆರಳುತ್ತಿದ್ದ 103 ಚಾರಣಿಗರನ್ನು ಬಾಳೂರು ಪೊಲೀಸರು ವಶಕ್ಕೆ ಪಡೆದು ಲಘು ಪ್ರಕರಣ ದಾಖಲಿಸಿ ದಂಡ ವಿಧಿಸಿ ವಾಪಸ್ ಕಳಿಸಿದ್ದಾರೆ.
ಇದನ್ನೂ ಓದಿ: 60% ಅಂಕ ಪಡೆದ ವಿದ್ಯಾರ್ಥಿಗಳಿಗೆ 50,000 ಸ್ಕಾಲರ್ ಶಿಪ್

ಚಾರ್ಮಾಡಿ ಘಾಟ್ ದುರ್ಗಮ ಅರಣ್ಯ ಪ್ರದೇಶದಲ್ಲಿ ಪ್ರವಾಸಿಗರು ಕಾನೂನು ಬಾಹಿರವಾಗಿ ಅರಣ್ಯಕ್ಕೆ ಪ್ರವೇಶಿಸಿ ಚಾರಣಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಮೇರೆಗೆ ಬಾಳೂರು ಪಿಎಸ್ಐ ದಿಲೀಪ್ ಕುಮಾರ್ ಹಾಗೂ ಬಣಕಲ್ ಪಿಎಸ್ಐ ರೇಣುಕಾ ದಾಳಿ ನಡೆಸಿ 103 ಚಾರಣಿಗರನ್ನು ವಶಕ್ಕೆ ಪಡೆದು ಬಾಳೂರು ಠಾಣೆಗೆ ಕರೆದೊಯ್ದು ಲಘು ಪ್ರಕರಣ ದಾಖಲಿಸಿದ್ದಾರೆ.
ಚಾರಣಿಗರನ್ನು ಬೆಂಗಳೂರು ಮೂಲದ ಐಟಿ ಕಂಪನಿ ಉದ್ಯೋಗಿಗಳು ಎನ್ನಲಾಗಿದೆ. ಪ್ರಯಾಣಕ್ಕೆ ಬಳಸಿದ ಖಾಸಗಿ ಬಸ್ ಹಾಗೂ 6 ಪಿಕ್ಅಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ರೈತರಿಗೆ ಎಚ್ಚರಿಕೆ; ಪಿಎಂ ಕಿಸಾನ್ ಹಣ 110 ಕೋಟಿ ವಂಚನೆ!












