ಸೊರಬ: (ನ್ಯೂಸ್ ಮಲ್ನಾಡ್ ವರದಿ) ದೇಶದಲ್ಲಿ ಸಕಾಲಿಕ ಮಳೆಯಾಗದೆ ಅಕಾಲಿಕವಾದ ಮಳೆಯಿಂದಾಗಿ ಜಲ ಕಂಟಕಗಳು ಎದುರಾಗಲಿದೆ. ಮಳೆ, ಗುಡುಗು, ಸಿಡಿಲು ಹೆಚ್ಚಾಗಿ ಭೂಮಿ ತಲ್ಲಣಗೊಳ್ಳಲಿದೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ತಾಲೂಕಿನ ಜಡೆ ಸಂಸ್ಥಾನ ಮಠದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಮಳೆ-ಬೆಳೆ ಆಗಲಿದೆ. ಆಕಸ್ಮಿಕವಾದ ಘಟನೆಗಳು ಜರುಗಿ ದೊಡ್ಡ ದೊಡ್ಡ ನಗರಗಳು ಆಪತ್ತನ್ನು ಎದುರಿಸುತ್ತವೆ. ರಾಜಕಾರಣದದಲ್ಲಿ ‘ಅರಸನ ಅರಮನೆ ಕಳೆಗುಂದಿತು. ಪಟ್ಟದ ಆನೆ ಗಾಂಭೀರ್ಯ ನಡೆದಿತು’ ಸತ್ಯ ಯಾವಾಗಲೂ ಕಹಿಯಾಗಿರುತ್ತದೆ. ಅಸತ್ಯ ಸಿಹಿಯಾಗಿರುತ್ತದೆ. ಹಿಂಗಾರು ಮಳೆ-ಗಾಳಿ ಆರ್ಭಟ ಹೆಚ್ಚುತ್ತದೆ. ಯಾವುದೇ ಜನ ಜೀವನದ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.

















