ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪಿಸ್ತೂಲ್ ಹಿಡಿದು ಹಣೆಗೆ ಗುಂಡು ಹಾರಿಸುವುದಾಗಿ ಬೆದರಿಸಿದ ಆರೋಪದಲ್ಲಿ ಇಂದಾವರದ ಯತೀಶ್ ಎಂಬಾತನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಉಂಡೇದಾಸರಹಳ್ಳಿಯ ಸಂದೀಪ್ ದೂರು ನೀಡಿದ್ದು, ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದಾವರ ಪ್ಯಾರಡೈಸ್ ಮಾಲೀಕ ಯತೀಶ್ ಬಳಿ ರೂಮಿಗೆ ಭಾನುವಾರ ವಿಚಾರಿಸಿದಾಗ ಏಕಾಏಕಿ ಆವಾಚ್ಯ ಪದಗಳಿಂದ ಜಾತಿ ನಿಂದನೆ ಮಾಡಿದ್ದಾನೆ. ನಂತರ ರಾತ್ರಿ 8ರ ಸುಮಾರಿಗೆ ರಾಮನಹಳ್ಳಿ ಒಲಂಪಿಯಾ ಹೋಟೇಲ್ ಬಳಿಗೆ ಪಿಸ್ತೂಲ್ ಹಿಡಿದು ಬಂದು ನೇರವಾಗಿ ಹಣೆಗೆ ಗುಂಡು ಹಾರಿಸುವುದಾಗಿ ಬೆದರಿಸಿದ. ಪಕ್ಕದಲ್ಲಿದ್ದ ಮಹೇಶ್ ಎಂಬುವರು ದೂಡಿದ್ದರಿಂದ ಅಪಾಯ ತಪ್ಪಿದೆ’ ಎಂದು ಸಂದೀಪ್ ದೂರಿನಲ್ಲಿ ವಿವರಿಸಿದ್ದಾರೆ.

ಪರಿಶಿಷ್ಟ ಜಾತಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಅಕ್ರಮ ಆಯುಧ ಬಳಕೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

















