ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಕಾಫಿನಾಡಿನಲ್ಲಿ ಮತ್ತೆ ಇಬ್ಬರಿಗೆ ಕೆಎಫ್ಡಿ (ಮಂಗನ ಕಾಯಿಲೆ) ಸೋಂಕು ಪತ್ತೆಯಾಗಿದೆ.
ಇದನ್ನೂ ಓದಿ: ಫಿಶ್ ಪ್ರಿಯರೇ ಎಚ್ಚರ…!; ಈ ಮೀನುಗಳನ್ನು ತಿಂದ್ರೆ ಆರೋಗ್ಯಕ್ಕಿದೆ ಕುತ್ತು!

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕರ್ಕೇಶ್ವರ ಗ್ರಾಮದಲ್ಲಿ ಇಬ್ಬರು ಯುವಕರಲ್ಲಿ ಶನಿವಾರ ಕೆಎಫ್ಡಿ (ಮಂಗನ ಕಾಯಿಲೆ) ಸೋಂಕು ಪತ್ತೆಯಾಗಿದೆ.
ಕರ್ಕೇಶ್ವರ ಗ್ರಾಮದ ಎಸ್ಟೇಟ್ನ 21, 23 ವರ್ಷದ ಒಂದೇ ಕುಟುಂಬದ ಇಬ್ಬರು ಯುವಕರಲ್ಲಿ ಸೋಂಕು ತಗುಲಿರುವುದು ತಪಾಸಣೆ ವೇಳೆ ದೃಢವಾಗಿದೆ. ಈ ಇಬರೂ ಯುವಕರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯವರಾಗಿದ್ದು, ಇತ್ತೀಚೆಗಷ್ಟೆ ಖಾಸಗಿ ಎಸ್ಟೇಟ್ಗೆ ಕೂಲಿ ಕೆಲಸಕ್ಕೆ ಬಂದಿದ್ದರು. ದಿಢೀರ್ ಜ್ವರ, ಸುಸ್ತು, ಮೈ ಕೈ ನೋವು ಕಾಣಿಸಿಕೊಂಡ ಕಾರಣ ಬಾಳೆಹೊನ್ನೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಕೊಪ್ಪಕ್ಕೆ ತೆರಳಿ ಪರೀಕ್ಷೆಗೆ ಒಳಪಟ್ಟಾಗ ಕೆಎಫ್ಡಿ ಸೋಂಕು ತಗಲಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ವಾಟ್ಸ್ಆ್ಯಪ್ ಬಳಕೆದಾರರಿಗೆ ಒಳ್ಳೆಯ ಸುದ್ದಿ; ಬರುತ್ತಿದೆ ಊಹಿಸಲಾಗದ ಫೀಚರ್
ಸದ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಅನಧಿಕೃತ ಪಂಪ್ಸೆಟ್ ಹೊಂದಿದ್ರೆ ಈ ಸುದ್ದಿ ಓದಿ; ಕಾನೂನು ಕ್ರಮ ಫಿಕ್ಸ್!, ಯಾಕೆ ಗೊತ್ತಾ?












