
ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನಲ್ಲಿ ಮತ್ತೆ ಇಬ್ಬರಿಗೆ ಕೆಎಫ್‌ಡಿ (ಮಂಗನ ಕಾಯಿಲೆ) ಪತ್ತೆಯಾಗಿದೆ.
ಇದನ್ನೂ ಓದಿ: ಫಿಶ್ ಪ್ರಿಯರೇ ಎಚ್ಚರ…!; ಈ ಮೀನುಗಳನ್ನು ತಿಂದ್ರೆ ಆರೋಗ್ಯಕ್ಕಿದೆ ಕುತ್ತು!

ಎನ್.ಆರ್.ಪುರ ತಾಲೂಕಿನ ಕರ್ಕೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಮತ್ತೆರಡು ಕೆಎಫ್‌ಡಿ (ಮಂಗನ ಕಾಯಿಲೆ) ಪ್ರಕರಣಗಳು ದೃಢಗೊಂಡ. ಕರ್ಕೇಶ್ವರ ಗ್ರಾಪಂ ವ್ಯಾಪ್ತಿಯ ಹುಣಸೇಕೊಪ್ಪ ಗೋಣಿಕೊಪ್ಪದ 52 ವರ್ಷದ ಪುರುಷ ಹಾಗೂ ಕರ್ಕೇಶ್ವರ ಗ್ರಾಮದ 15 ವರ್ಷದ ಬಾಲಕನಲ್ಲಿ ಸೋಂಕು ದೃಢವಾಗಿದೆ.

ಈ ಇಬ್ಬರಿಗೂ ಜ್ವರ ಹಾಗೂ ಸುಸ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊಪ್ಪದ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾದಾಗ ಕೆಎಫ್‌ಡಿ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಅನಧಿಕೃತ ಪಂಪ್ಸೆಟ್ ಹೊಂದಿದ್ರೆ ಈ ಸುದ್ದಿ ಓದಿ; ಕಾನೂನು ಕ್ರಮ ಫಿಕ್ಸ್!, ಯಾಕೆ ಗೊತ್ತಾ?
ಇಬ್ಬರೂ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಪತ್ತೆಯಾದ ಗ್ರಾಮಕ್ಕೆ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕರ್ಕೇಶ್ವರ ಗ್ರಾಪಂ ವ್ಯಾಪ್ತಿಯಲ್ಲಿ ಇದುವರೆಗೆ ಎಂಟು ಕೆಎಫ್‌ಡಿ ಪ್ರಕರಣಗಳು ದಾಖಲಾಗಿವೆ.













