ಕಡೂರು: ಕಡವೆ ಬೇಟೆ: ಇಬ್ಬರ ಬಂಧನ

ಕಡೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಗನೀ ಬಸವನಹಳ್ಳಿಯಲ್ಲಿ ಸೆ.1ರಂದು ಕಡವೆ ಬೇಟೆಯಾಡಿದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಸಗನಿ ಬಸವನಹಳ್ಳಿ ಮಂಜುನಾಥ ಹಾಗೂ ಮಂಜಾಭೋವಿ ಬಂಧಿತರು.


ಇದನ್ನೂ ಓದಿ: ರಾಜ್ಯದ SC, ST ಸಮುದಾಯದವರ ಗಮನಕ್ಕೆ; ಇಲ್ಲಿದೆ ನಿಮಗೆ ಮುಖ್ಯ ಮಾಹಿತಿ


ಆರೋಪಿಗಳು ಇತರರೊಂದಿಗೆ ಸೇರಿ ಬೇಟೆಯಾಡಿದ್ದು, ಈ ಬಗ್ಗೆ ಸುಳಿವಿ ಸಿಕ್ಕ ಕಾರಣ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದಲ್ಲಿ ಪತ್ತೆಯಾದ ಕಡವೆ ಮಾಂಸ, ಚರ್ಮ ಹಾಗೂ ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.


ಇದನ್ನೂ ಓದಿ: ವಿವಿಧ ಯೋಜನೆಗೆ ಅರ್ಜಿ ಆಹ್ವಾನ;  4 ಲಕ್ಷ ಸಹಾಯಧನ


ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪಮಹಾನಿರೀಕ್ಷಕಿ ಜಿ.ಸಂಗೀತಾ, ಸಿಐಡಿ ಅರಣ್ಯ ಮಡಿಕೇರಿ ಘಟಕದ ಪೊಲೀಸ್ ಅಧೀಕ್ಷಕ (ಪ್ರಭಾರ) ಪಿ. ಎಸ್. ಸುದರ್ಶನ್ ಮಾರ್ಗದರ್ಶನದಲ್ಲಿ ಉಪನಿರೀಕ್ಷಕಿ ಕೆ.ಆರ್.ಸುನೀತಾ ನೇತೃತ್ವದಲ್ಲಿ ಸಿಬ್ಬಂದಿ ಡಿ.ಎಚ್.ದಿನೇಶ, ಎಸ್.ಕೆ.ದಿವಾಕರ, ಕೆ.ಎಸ್‌.ದಿಲೀಪ್, ಎ.ಜಿ.ಹಾಲೇಶ್, ಎಚ್.ದೇವರಾಜ, ವೈ.ಹೇಮಾವತಿ, ಚಾಲಕರಾದ ತಿಮ್ಮ ಶೆಟ್ಟಿ ಹಾಗೂ ಕಡೂರು ವಲಯ ಅರಣ್ಯಾಧಿಕಾರಿ ಎಂ.ಆರ್.ಹರೀಶ್ ಭಾಗಿಯಾಗಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.