ಚಿಕ್ಕಮಗಳೂರು: ಕಡವೆ ಶಿಖಾರಿ ಮಾಡಿದ್ದ ವ್ಯಕ್ತಿ ಬಂಧನ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಡವೆ ಶಿಕಾರಿ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ದೇವಯ್ಯ ಬಂಧಿತ ವ್ಯಕ್ತಿ.


ಇದನ್ನೂ ಓದಿ: ಜೀವವಿಲ್ಲದ ದೇಹಗಳೊಂದಿಗೆ ಅಘೋರಿಗಳ ಜೀವನ…!; ಅಘೋರಿಗಳ ವಿಚಿತ್ರ ಜೀವನ ಶೈಲಿ ಕೇಳಿದ್ರೆ ಬೆಚ್ಚಿ ಬೀಳ್ತೀರಾ!


ಚಿಕ್ಕಮಗಳೂರು ವಲಯದ ಅತ್ತಿಗಿರಿ ಸೆಕ್ಷನ್, ತೋಗರಿಹಂಕಲ್ ಗ್ರಾಮದ ಸರ್ವೇ ಸಂಖ್ಯೆ 37 ರಲ್ಲಿ ಕೂತನ್ಕುಲ್ ಎಸ್ಟೇಟ್ ನಲ್ಲಿ ಇಂದು ಕಡವೆ ಶಿಖಾರಿ ಮಾಡಿ ಮಾಂಸವನ್ನು ತುಂಡು ಮಾಡುತ್ತಿದ್ದಾಗ ಅರಣ್ಯ ಸಂಚಾರಿ ದಳದವರು ದಾಳಿ ಮಾಡಿ ಬಂಧಿಸಿದ್ದಾರೆ.

ವನ್ಯಜೀವಿ ಸಾಂಬಾರ್ ಜಿಂಕೆಯ ಅಂದಾಜು 40 kg ಮಾಂಸ ಮತ್ತು ಚರ್ಮ, ಚೂರಿ ಹಾಗೂ ಬೇಟೆಗೆ ಬಳಸುತ್ತಿದ್ದ 2 rifle ಗಳನ್ನು ವಶಕ್ಕೆ ಪಡೆದಿದ್ದಾರೆ. ಒಂಟಿ ನಳಿಕೆ ರೈಫಲ್ ಹಾಗೂ ಐವತ್ತಕ್ಕೂ ಹೆಚ್ಚು ಜೀವಂತ ಬಳಸಿದ ಗುಂಡು ಪತ್ತೆಯಾಗಿದ್ದು, ವನ್ಯಜೀವಿ ಹಾಗೂ ಅರಣ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿದ್ದಾರೆ.


ಇದನ್ನೂ ಓದಿ: ರಾಜ್ಯದ BPL ಕಾರ್ಡ್ ದಾರರಿಗೆ ಮುಖ್ಯಮಂತ್ರಿಯಿಂದ ಮುಖ್ಯ ಮಾಹಿತಿ; ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಈ ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್, ವಲಯ ಅರಣ್ಯಾಧಿಕಾರಿ ವೆಂಕಟೇಶ್, ಉಪ ವಲಯ ಅರಣ್ಯಾಧಿಕಾರಿ ಪ್ರಹಾರ್ಶ್, ಪೂರಪ್ಪ ಮತ್ತು ಇತರರು ಇದ್ದರು.


ಇದನ್ನೂ ಓದಿ: ಸ್ಕೂಲ್‌ ಬಸ್‌ಗೆ ಹಳದಿ ಕಲರ್‌ ಯಾಕೆ ಇರುತ್ತೆ ಗೊತ್ತಾ!; ಇದರ ಹಿಂದಿದೆ ರಹಸ್ಯ ಸಂದೇಶ!


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.