ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಚುಕ್ಕಿ ಜಿಂಕೆ ಬೇಟೆಯಾಡಿದ ಆರೋಪದ ಮೇಲೆ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ರಾತ್ರಿ ಬಂಧಿಸಿದ್ದಾರೆ.
ಇದನ್ನೂ ಓದಿ: ಪಾನ್ ಕಾರ್ಡ್ ಹೊಂದಿರುವವರ ಗಮನಕ್ಕೆ; ಇಂತಹವರಿಗೆ 10 ಸಾವಿರ ದಂಡ!

ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ದೊಡ್ಡಿನತಲೆ ನಿವಾಸಿಗಳಾದ ಎಸ್.ಎನ್.ಲೋಕೇಶ್ ಹಾಗೂ ಚಿನ್ನಯ್ಯ ಬಂಧಿತ ಆರೋಪಿಗಳು.

ಇದನ್ನೂ ಓದಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ; 15,000 ಸಂಬಳ
ಆರಂಬಳ್ಳಿ ಮೀಸಲು ಅರಣ್ಯದ ಸರ್ವೆ ನಂ. 48ರಲ್ಲಿ ಚುಕ್ಕಿ ಜಿಂಕೆ ಬೇಟೆ ಮಾಡಿ, ಎಸ್.ಎನ್.ಲೋಕೇಶ್ ಮನೆಯಲ್ಲಿ ಮಾಂಸ ಬೇಯಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ನರಸಿಂಹರಾಜಪುರ ವಲಯ ಅರಣ್ಯಾಧಿಕಾರಿ ಪ್ರವೀಣ್ ಕುಮಾರ್ ನೇತೃತ್ವದ ತಂಡ, ಆರೋಪಿಗಳನ್ನು ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಮನೆ, ಆಫೀಸ್, ಅಂಗಡಿಯ ವಿದ್ಯುತ್ ಮೀಟರ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಇಂಧನ ಸಚಿವ















