ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆಗೆ ಹೋಗುವ ಬಣಕಲ್ ವಿಲೇಜ್ ಸಮೀಪ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರ ನಡುವೆ ಮಾತಿನ ಚಕಮಕಿ ನಡೆದಿದೆ.
ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 8000 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ

ದೇವರಮನೆಗೆ ಸಾಗುವ ಬಣಕಲ್ ವಿಲೇಜ್ ರಸ್ತೆ ಕಿರಿದಾಗಿದ್ದು, ಭಾರಿ ವಾಹನಗಳ ಓಡಾಟ ಕಷ್ಟವಾಗಿದೆ. ಆದರೂ ಕಿರಿದಾದ ರಸ್ತೆಯಲ್ಲಿ ಪ್ರವಾಸಿಗರ ಬಸ್ಸುಗಳ ಓಡಾಟದಿಂದ ದೇವರು ಮನೆ ಸಂಪರ್ಕಿಸುವ ರಸ್ತೆ ಸುಮಾರು ಎರಡು ಮೂರು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಕಾಫಿ ತೋಟ ಹಾಗೂ ಕೃಷಿ ಜಮೀನಿಗೆ ಸಾಗಲು ಸ್ಥಳೀಯರು ಪರದಾಡಿದ್ದು, ಪ್ರವಾಸಿಗರ ವಿರುದ್ದ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: 10th ಪಾಸ್ ಆದ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 3,500 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
ನೂತನ ಹೆರಿಗೆ ವೈದ್ಯರ ನೇಮಕ: ನೇಮಕವಾಗಿ 24 ಗಂಟೆಗಳ ಒಳಗೆ ಕೊಪ್ಪಕ್ಕೆ ನಿಯೋಜನೆ
ಆದರೆ ಕಳೆದ ವಾರ ಶೃಂಗೇರಿ ತಾಲೂಕು ಆಸ್ಪತ್ರೆಗೆ ನೂತನವಾಗಿ ಡಾ. ವರ್ಷಾ ರಾಮ್ ಎಂಬ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ, ಆದರೆ ನೇಮಕವಾಗಿ ಕೇವಲ 24 ಗಂಟೆಗಳ ಒಳಗಾಗಿ ಅವರನ್ನು ಕೊಪ್ಪ ತಾಲ್ಲೂಕು ಆಸ್ಪತ್ರೆಗೆ ನಿಯೋಜನೆ ಮಾಡಲಾಗಿದೆ.
ಹೇಳುವವರಿಲ್ಲ ಕೇಳುವವರಿಲ್ಲದಂತಾದ ಶೃಂಗೇರಿ :
ಕೊಪ್ಪ ಆಸ್ಪತ್ರೆಯಲ್ಲಿ ಈಗಾಗಲೇ ಒಬ್ಬರು ಹೆರಿಗೆ ವೈದ್ಯರಿದ್ದಾರೆ, ಆದರೆ ಕಳೆದ ಒಂದು ವರ್ಷದಿಂದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರನ್ನು ಹೊಂದಿಲ್ಲದ ಶೃಂಗೇರಿ ಆಸ್ಪತ್ರೆಗೆ ಈಗ ನೇಮಕವಾಗಿರುವ ವೈದ್ಯರನ್ನು ಸಹ ಒತ್ತಡಕ್ಕೆ ಒಳಗಾಗಿ ಕೊಪ್ಪಕ್ಕೆ ನಿಯೋಜನೆ ಮಾಡಲಾಗಿದೆ, ಮತ್ತೊಂದೆಡೆ ಶೃಂಗೇರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಸಹ ಇದ್ದು ಅದಕ್ಕೂ ಪರಿಹಾರ ಇಲ್ಲವಾಗಿದೆ. ಒಟ್ಟಾರೆ ಶೃಂಗೇರಿ ಮಟ್ಟಿಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ.
ಈ ಹಿಂದೆಯೂ ಮೂಳೆ ತಜ್ಞರ ನಿಯೋಜನೆ:
ಈ ಹಿಂದೆ ಸಹ ಶೃಂಗೇರಿ ಆಸ್ಪತ್ರೆಗೆ ನೇಮಕವಾಗಿದ್ದ ಮೂಳೆ ತಜ್ಞರನ್ನು ಕೊಪ್ಪಕ್ಕೆ ನಿಯೋಜನೆ ಮಾಡಲಾಗಿತ್ತು , ಕಣ್ಣಿನ ತಜ್ಞರು ತಿಂಗಳಿಗೆ ಒಂದು ಬಾರಿ ಮಾತ್ರ ಶೃಂಗೇರಿಗೆ ನಿಯೋಜನೆ ಮಾಡಲಾಗಿತ್ತು. ಆಗ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿಯ ಒತ್ತಡಕ್ಕೆ ಮಣಿದು ಶೃಂಗೇರಿಗೆ ವಾರಕ್ಕೆ ಎರಡು ದಿನ ಮೂಳೆ ತಜ್ಞರ ನೇಮಕ, ವಾರಕ್ಕೆ ಒಂದು ದಿನ ಕಣ್ಣಿನ ತಜ್ಞರ ನಿಯೋಜನೆ ಆದೇಶ ಮಾಡಲಾಗಿತ್ತು. ಆದರೆ ಈಗ ಮೂಳೆ ತಜ್ಞರು ಸಹ ಬೇರೆಡೆಗೆ ವರ್ಗಾವಣೆ ಆಗಿದ್ದಾರೆ.












