ಆಟವಾಡೋ ಮಕ್ಕಳೆಲ್ಲ ಕುಡಿದು ಸಾಯ್ತಿದ್ದಾರೆ, ಬಾರ್ ಕ್ಲೋಸ್ ಮಾಡ್ಸಿ ಸರ್’: ಸಚಿವರೆದುರು ಮಹಿಳೆ ಗೋಳು

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಆಟವಾಡೋ ಮಕ್ಕಳೆಲ್ಲ ಬಾರ್ ಗೆ ಹೋಗ್ತಾರೆ ಸರ್, ನಮ್ಮೂರಲ್ಲಿ ಕದ್ದುಮುಚ್ಚಿ ಎಣ್ಣೆ ಮಾರಾಟ ಮಾಡ್ತಿದ್ದಾರೆ, ಆಟವಾಡ್ಕೊಂಡು ಬದುಕಿ-ಬಾಳಬೇಕಾದ ಮಕ್ಕಳೆಲ್ಲಾ ಕುಡಿದು ಸಾಯ್ತಿದ್ದರೆ ಸರ್’ ಎಂದು ಗ್ರಾಮದಲ್ಲಿ ಬಾರ್ ನಿಂದಾಗುತ್ತಿರುವ ಅನಾಹುತವನ್ನ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರ ಮುಂದೆ ಮಹಿಳೆ ಬಿಚ್ಚಿಟ್ಟಿದ್ದಾಳೆ.


ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 8000 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ವೈದ್ಯಕೀಯ ಸಚಿವ ಶರಣ್ ಪ್ರಕಾಶ್ ಪಾಟೀಲ್ ಚಿಕ್ಕಮಗಳೂರಿನ ಮರ್ಲೆ ಗ್ರಾಮಕ್ಕೆ ಭೇಟಿ ನೀಡಿದ ವೇಳೆ, ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಕೈಮುಗಿದು ಬೇಡಿಕೊಂಡಿದ್ದಾಳೆ. ಮರ್ಲೆ ಗ್ರಾಮದಲ್ಲಿ ವೈನ್ ಶಾಪ್ ನಿಂದಾಗಿ ಆಡುವ ಮಕ್ಕಳು ಬಾರ್‌ಗೆ ಹೋಗುತ್ತಿದ್ದಾರೆ. ದಯವಿಟ್ಟು ವೈನ್ ಶಾಪ್ ಬಂದ್ ಮಾಡ್ಸಿ ಸರ್ ಎಂದು ಸಚಿವರ ಮುಂದೆ ಕೈಮುಗಿದು ಮಹಿಳೆ ಮನವಿ ಮಾಡಿದ್ದಾರೆ.


ಇದನ್ನೂ ಓದಿ: 10th ಪಾಸ್ ಆದ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 3,500 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಈ ಹಿಂದೆ ಡಿಸಿ ಕಚೇರಿ ಮುಂದೆಯೂ ವೈನ್ ಶಾಪ್ ಕ್ಲೋಸ್ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ನಿರಂತರವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂದು ಸಚಿವರ ಬಳಿ ಗ್ರಾಮಸ್ಥರು ಕೂಡ ಅಳಲು ತೋಡಿಕೊಂಡಿದ್ದಾರೆ.


ಇದನ್ನೂ ಓದಿ: ಪಿಯುಸಿ ವಿದ್ಯಾರ್ಥಿಗಳಿಗೆ ತಿಂಗಳಿಗೆ ಸಿಗಲಿದೆ 3,200 ಸ್ಕಾಲರ್ ಶಿಪ್; ಈ ರೀತಿ ಅರ್ಜಿ ಸಲ್ಲಿಸಿ


ಶೃಂಗೇರಿಗೆ ನೂತನ ಹೆರಿಗೆ ವೈದ್ಯರ ನೇಮಕ: ನೇಮಕವಾಗಿ 24 ಗಂಟೆಗಳ ಒಳಗೆ ಕೊಪ್ಪಕ್ಕೆ ನಿಯೋಜನೆ
ಶೃಂಗೇರಿ:  (ನ್ಯೂಸ್ ಮಲ್ನಾಡ್ ವರದಿ)  ಕಳೆದ ಒಂದು ವರ್ಷಕ್ಕೂ ಅಧಿಕ ಅವಧಿಯಿಂದ ಶೃಂಗೇರಿ ತಾಲ್ಲೂಕು ಆಸ್ಪತ್ರೆಯಲ್ಲಿ ಹೆರಿಗೆ ವೈದ್ಯರು ಇಲ್ಲ, ಅದರಿಂದಾಗಿ ಶೃಂಗೇರಿ ಜನರ ಪರದಾಟ ಅಷ್ಟಿಷ್ಟಲ್ಲ, ಪ್ರಸೂತಿ ಮತ್ತು ಸ್ತ್ರೀರೋಗಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಬೇಕಾದಲ್ಲಿ 30 ಕಿಲೋಮೀಟರ್ ದೂರದ ಕೊಪ್ಪಕ್ಕೆ ತೆರಳಬೇಕಾಗಿದೆ.

ನೂತನ ಹೆರಿಗೆ ವೈದ್ಯರ ನೇಮಕ: ನೇಮಕವಾಗಿ 24 ಗಂಟೆಗಳ ಒಳಗೆ ಕೊಪ್ಪಕ್ಕೆ ನಿಯೋಜನೆ

ಆದರೆ ಕಳೆದ ವಾರ ಶೃಂಗೇರಿ ತಾಲೂಕು ಆಸ್ಪತ್ರೆಗೆ ನೂತನವಾಗಿ ಡಾ. ವರ್ಷಾ ರಾಮ್ ಎಂಬ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ, ಆದರೆ ನೇಮಕವಾಗಿ ಕೇವಲ 24 ಗಂಟೆಗಳ ಒಳಗಾಗಿ ಅವರನ್ನು ಕೊಪ್ಪ ತಾಲ್ಲೂಕು ಆಸ್ಪತ್ರೆಗೆ ನಿಯೋಜನೆ ಮಾಡಲಾಗಿದೆ.

ಹೇಳುವವರಿಲ್ಲ ಕೇಳುವವರಿಲ್ಲದಂತಾದ ಶೃಂಗೇರಿ :

ಕೊಪ್ಪ ಆಸ್ಪತ್ರೆಯಲ್ಲಿ ಈಗಾಗಲೇ ಒಬ್ಬರು ಹೆರಿಗೆ ವೈದ್ಯರಿದ್ದಾರೆ, ಆದರೆ ಕಳೆದ ಒಂದು ವರ್ಷದಿಂದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರನ್ನು ಹೊಂದಿಲ್ಲದ ಶೃಂಗೇರಿ ಆಸ್ಪತ್ರೆಗೆ ಈಗ ನೇಮಕವಾಗಿರುವ ವೈದ್ಯರನ್ನು ಸಹ ಒತ್ತಡಕ್ಕೆ ಒಳಗಾಗಿ ಕೊಪ್ಪಕ್ಕೆ ನಿಯೋಜನೆ ಮಾಡಲಾಗಿದೆ, ಮತ್ತೊಂದೆಡೆ ಶೃಂಗೇರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಸಹ ಇದ್ದು ಅದಕ್ಕೂ ಪರಿಹಾರ ಇಲ್ಲವಾಗಿದೆ. ಒಟ್ಟಾರೆ ಶೃಂಗೇರಿ ಮಟ್ಟಿಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ.

ಈ ಹಿಂದೆಯೂ ಮೂಳೆ ತಜ್ಞರ ನಿಯೋಜನೆ:
ಈ ಹಿಂದೆ ಸಹ ಶೃಂಗೇರಿ ಆಸ್ಪತ್ರೆಗೆ ನೇಮಕವಾಗಿದ್ದ ಮೂಳೆ ತಜ್ಞರನ್ನು ಕೊಪ್ಪಕ್ಕೆ ನಿಯೋಜನೆ ಮಾಡಲಾಗಿತ್ತು , ಕಣ್ಣಿನ ತಜ್ಞರು ತಿಂಗಳಿಗೆ ಒಂದು ಬಾರಿ ಮಾತ್ರ ಶೃಂಗೇರಿಗೆ ನಿಯೋಜನೆ ಮಾಡಲಾಗಿತ್ತು. ಆಗ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿಯ ಒತ್ತಡಕ್ಕೆ ಮಣಿದು ಶೃಂಗೇರಿಗೆ ವಾರಕ್ಕೆ ಎರಡು ದಿನ ಮೂಳೆ ತಜ್ಞರ ನೇಮಕ, ವಾರಕ್ಕೆ ಒಂದು ದಿನ ಕಣ್ಣಿನ ತಜ್ಞರ ನಿಯೋಜನೆ ಆದೇಶ ಮಾಡಲಾಗಿತ್ತು. ಆದರೆ ಈಗ ಮೂಳೆ ತಜ್ಞರು ಸಹ ಬೇರೆಡೆಗೆ ವರ್ಗಾವಣೆ ಆಗಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.